Friday, September 24, 2021
spot_img
Homeಸ್ಥಳೀಯ ಸುದ್ದಿಆಸ್ಕರ್‌ ರಾಜಧರ್ಮದಲ್ಲಿ ಮೆರೆದು ಮರೆಯಾದ ಅಜಾತಶತ್ರು : ಬಿಪಿನ್‌ ಚಂದ್ರ ಪಾಲ್‌

ಆಸ್ಕರ್‌ ರಾಜಧರ್ಮದಲ್ಲಿ ಮೆರೆದು ಮರೆಯಾದ ಅಜಾತಶತ್ರು : ಬಿಪಿನ್‌ ಚಂದ್ರ ಪಾಲ್‌

ಕಾರ್ಕಳ : ಓಸ್ಕರ್ ಫೆರ್ನಾಂಡಿಸ್ ರಾಜಧರ್ಮದ ಪಥದಲ್ಲಿ ಮೆರೆದು ಮರೆಯಾದ ಅಜಾತಶತ್ರು. ಕಾರ್ಯಕರ್ತರ ಹೆಗಲಿಗೆ ಕೈ ಹಾಕಿ ಅವರ ದು:ಖ ದುಮ್ಮಾನಗಳನ್ನು ಆಲಿಸಬಲ್ಲ ಅಪರೂಪದ ಜನನಾಯಕ. ಅವರ ನಿಧನದಿಂದ ಕಾಂಗ್ರೆಸ್ ಬಡವಾಗಿದೆ. ಅವರು ಬಿಟ್ಟು ಹೋದ ಆದರ್ಶ ಕಾಂಗ್ರೆಸ್ ಪಕ್ಷಕ್ಕೆ ಸ್ಫೂರ್ತಿಯಾಗಲಿದೆ ಎಂದು ಡಿಸಿಸಿ ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಸ್ಕರ್‌ ರಾಜಕೀಯದ ದ್ರುವತಾರೆ-ಕಾರ್ಕಳ ನಗರ ಕಾಂಗ್ರೆಸ್‌

ಕಾಂಗ್ರೆಸ್ ಪಕ್ಷದ ಹಿರಿಯ ಜನಾನುರಾಗಿ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಸರಳ ಸಜ್ಜನಿಕೆಯ ತತ್ವಾದರ್ಶ ಮತ್ತು ಪಕ್ಷ ನಿಷ್ಠೆಯ ಪ್ರತಿರೂಪರಾಗಿದ್ದ ಅವರು ಜನಮಾನಸದೊಂದಿಗೆ ಸ್ಪಂದಿಸುತ್ತಲೇ ರಾಜಕೀಯದ ಧ್ರುವತಾರೆಯಾಗಿ ಮೆರೆದು ಮರೆಯಾಗಿದ್ದಾರೆ ಎಂದು ಕಾರ್ಕಳ ನಗರ ಕಾಂಗ್ರೆಸ್‌ ಸಂತಾಪ ಸಂದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!