Wednesday, January 19, 2022
spot_img
Homeಸ್ಥಳೀಯ ಸುದ್ದಿಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ದರೋಡೆಗೆ ಯತ್ನ

ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ದರೋಡೆಗೆ ಯತ್ನ

ಮಂಗಳೂರು: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪಾದಚಾರಿ ಮಹಿಳೆಯ ಬ್ಯಾಗ್ ಸುಲಿಗೆಗೆ ಯತ್ನಿಸಿದ ಘಟನೆ ಮಂಗಳೂರಿನ ಬೆಂದೂರ್ ವೆಲ್ ಸಮೀಪ ನಡೆದಿದೆ. ಆದರೆ, ಮಹಿಳೆ ಪ್ರತಿರೋಧ ತೋರಿದ ಕಾರಣ ಆರೋಪಿಗಳು ಖಾಲಿ ಕೈಯಲ್ಲಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಮಂಗಳೂರಿನ ಬೆಂದೂರ್ ವೆಲ್ ಸೆಂಟ್ ಆಗ್ನೇಸ್ ಕಾಲೇಜು ಗೇಟ್ ಮುಂಭಾಗ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಬಿಳಿ ರಿಟ್ಜ್ ಕಾರಿನಲ್ಲಿ ಬಂದ ಆರೋಪಿಗಳಲ್ಲಿ ಒಬ್ಬಾತ ಕಾರಿನಿಂದ ಇಳಿದು ಏಕಾಏಕಿ ಮಹಿಳೆಯ ಬ್ಯಾಗ್ ಸುಲಿಗೆಗೆ ಯತ್ನಿಸಿದ್ದಾನೆ. ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಸಿಯಲು ಆರೋಪಿ ಪ್ರಯತ್ನಿಸಿದ್ದಾನೆ.


ಈ ವೇಳೆ ಮಹಿಳೆ ಬ್ಯಾಗ್ ಕಸಿಯಲು ಬಿಡದೇ ತನ್ನ ರಕ್ಷಣೆಗೆ ತಾನೇ ಮುಂದಾದರು. ದರೋಡೆಗೆ ಕಾರಿನಿಂದ ಇಳಿದ ವ್ಯಕ್ತಿಗೆ ವಾಪಸ್ ಥಳಿಸಿದರು. ಅದಷ್ಟೇ ಅಲ್ಲದೇ ಆರೋಪಿಯನ್ನು ಹಿಡಿಯುವ ಪ್ರಯತ್ನವನ್ನು ಮಹಿಳೆ ಮಾಡಿದ್ದಾರೆ. ಮಹಿಳೆಯ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸಾರ್ವಜನಿಕರು ಕೂಡಾ ಮಹಿಳೆಯರ ರಕ್ಷಣೆಗೆ ಬಂದಿದ್ದಾರೆ. ಅಪಾಯವನ್ನು ಅರಿತ ಆರೋಪಿ ಹೆದರಿ ಎದ್ದು, ಬಿದ್ದು ಓಡಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆರೋಪಿಗೆ ಸುಲಿಗೆಗೆ ಯಾವುದೇ ಸೊತ್ತು ಸಿಕ್ಕಿಲ್ಲ.
ಘಟನೆಯ ಇಡೀ ದೃಶ್ಯಾವಳಿ ಸಿಸಿಟಿವಿ ಮತ್ತು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಹಿಳೆಯನ್ನು ಬೀಳಿಸಿ ಬ್ಯಾಗ್‌ ದರೋಡೆಗೆ ಮುಂದಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಮಹಿಳೆಯ ಪ್ರತಿರೋಧವೂ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!