ಅಮಾಯಕ ಹಿಂದುಗಳಿಗೆ ಆಮಿಷ ಒಡ್ಡಿ ಮತಾಂತರ – ಸಹಿಸಲಸಾಧ್ಯ : ಕಾರ್ಕಳ ಬಿಜೆಪಿ ಖಂಡನೆ

ಒಂದೆಡೆ ಮತಾಂತರ ಮತ್ತೊಂದೆಡೆ ಗೋಕಳ್ಳತನ-ಹಿಂದುಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ

ಕಾರ್ಕಳ : ಹಿಂದು ಧರ್ಮೀಯರನ್ನು ಗುರಿಯಾಗಿಸಿಕೊಂಡು ಷಡ್ಯಂತ್ರ ನಡೆಸಿ ಮತಾಂತರ ಮಾಡುವ ಆರೋಪಗಳು ಕಾರ್ಕಳದ ವಿವಿಧೆಡೆ ಕಂಡು ಬರುತ್ತಿದೆ. ಇತ್ತೀಚೆಗೆ ಇಂತಹ ಕುಕೃತ್ಯಗಳು ಮಿತಿಮೀರಿದ್ದು ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ನಡೆಸಿ ಹಿಂದೂಗಳ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತಿದ್ದಾರೆ. ಒಂದೆಡೆ ಮತಾಂತರ ಮತ್ತೊಂದು ಕಡೆ ಗೋಕಳ್ಳತನ ಹಿಂದುಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡುತ್ತಿದೆ ಎಂದು ಕಾರ್ಕಳ ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ.
ಸಮಾಜದ ಅಶಾಂತಿಗೆ ಕಾರಣವಾಗುವ ಇಂತಹ ಕೃತ್ಯವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ಎಲ್ಲ ಧರ್ಮಗಳನ್ನು ಗೌರವಿಸುವುದರ ಜೊತೆಗೆ ಮಾತೃ ಧರ್ಮದ ರಕ್ಷಣೆಗೆ ಹಾಗೂ ಗೋಮಾತೆಯ ರಕ್ಷಣೆಗೆ ಬಿಜೆಪಿ ಪಕ್ಷ ಬದ್ಧವಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































































































































error: Content is protected !!
Scroll to Top