Wednesday, January 26, 2022
spot_img
Homeಸ್ಥಳೀಯ ಸುದ್ದಿನಕ್ರೆ : ದನದ ಕಾಲು ಕಡಿದ ದುಷ್ಕರ್ಮಿ- ದೂರು ದಾಖಲು

ನಕ್ರೆ : ದನದ ಕಾಲು ಕಡಿದ ದುಷ್ಕರ್ಮಿ- ದೂರು ದಾಖಲು

ಹಿಂದು ಜಾಗರಣೆ ವೇದಿಕೆ ಖಂಡನೆ

ಕಾರ್ಕಳ : ಕುಕ್ಕುಂದೂರು ಗ್ರಾಮದ ನಕ್ರೆ ಎಂಬಲ್ಲಿ ವ್ಯಕ್ತಿಯೋರ್ವರು ದನದ ಕಾಲ ಕಡಿದ ಕೃತ್ಯ ಎಸಗಿದ್ದು, ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ನಕ್ರೆ ಪೊಸನೊಟ್ಟು ನಿವಾಸಿ ಶೀನ ಎಂಬವರಿಗೆ ಸೇರಿದ ದನವನ್ನು ಸೆ. 11ರಂದು ಮೇಯಲು ಬಿಟ್ಟಿದ್ದು ಸಂಜೆ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಅದನ್ನು ಹುಡುಕಾಡಿದಾಗ ತಮ್ಮ ನೆರೆ ಮನೆಯ ನಿವಾಸಿ ಡೆಮ್ಮಿ ಡಿಸೋಜಾರವರ ಮನೆಯ ಹಿತ್ತಲಿಗೆ ಹೋಗಿತ್ತು. ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಡೆಮ್ಮಿ ಡಿಸೋಜಾ ಅವರು ತಮ್ಮ ಕೈಯಲ್ಲಿದ್ದ ಕತ್ತಿಯನ್ನು ದನಕ್ಕೆ ಎಸೆದಾಗ ದನ ಕಾಲಿಗೆ ತಾಗಿ ಗಾಯವಾಗಿರುತ್ತದೆ. ಶೀನ ಅವರ ದನ ಡೆಮ್ಮಿಯವರ ಕೌಂಪೌಂಡು ಒಳಗಡೆ ಬರುತ್ತಿದೆ ಎನ್ನುವ ಕಾರಣಕ್ಕಾಗಿ ಹಲವು ತಿಂಗಳುಗಳಿಂದ ಇವರಿಬ್ಬರ ಮಧ್ಯೆ ತಕರಾರು ನಡೆಯುತ್ತಿತ್ತು. ಶೀನ ಅವರ ಮಗಳು ಸೆ. 12ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ.

ನಕ್ರೆಯಲ್ಲಿ ಗೋವಿನ ಕಾಲು ಕಡಿದ ಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ಈ ಕುರಿತು ಹಿಂದು ಜಾಗರಣ ವೇದಿಕೆ ಕಾರ್ಕಳ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ನಾರಾವಿ ಮಾತನಾಡಿ, ಗೋವಿನ ಕಾಲು ಕಡಿಯುವಂತ ದುಷ್ಕೃತ್ಯ ನಡೆಸಿರುವ ದುಷ್ಕರ್ಮಿಯ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!