Saturday, October 16, 2021
spot_img
Homeರಾಜ್ಯರಸ್ತೆ ಅಪಘಾತ: ತೆಲುಗು ಚಿತ್ರ ನಟ ಸಾಯಿ ಧರಮ್ ತೇಜ್ ಸ್ಥಿತಿ ಗಂಭೀರ

ರಸ್ತೆ ಅಪಘಾತ: ತೆಲುಗು ಚಿತ್ರ ನಟ ಸಾಯಿ ಧರಮ್ ತೇಜ್ ಸ್ಥಿತಿ ಗಂಭೀರ

ಹೈದರಾಬಾದ್:‌ ಖ್ಯಾತ ತೆಲುಗು ಚಿತ್ರನಟ ಸಾಯಿ ಧರಮ್ ತೇಜ್ ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್‌ ನ ಹೈಟೆಕ್‌ ಸಿಟಿ ಸಮೀಪದ ದುರ್ಗಮ್‌ ಚೆರು ಬಳಿ ಈ ಅಪಘಾತ ಸಂಭವಿಸಿದೆ.
ಶುಕ್ರವಾರ ಸಂಜೆ 8.30 ರ ಸುಮಾರಿಗೆ ಐಟಿ ಕಾರಿಡಾರ್‌ನಲ್ಲಿನ ನಾಲೆಡ್ಜ್ ಸಿಟಿ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ಜ್ಯೂಬ್ಲಿ ಹಿಲ್ಸ್‌ನಿಂದ ಗಚಿಬೌಲಿ ಕಡೆಗೆ ಸಾಯಿ ಧರಮ್ ತೇಜ್ ಹೊರಟ್ಟಿದ್ದರು. ತಮ್ಮ ಸ್ಪೋರ್ಟ್ಸ್ ಬೈಕ್‌ನಲ್ಲಿ ಸಾಯಿ ಧರಮ್ ತೇಜ್ ಪ್ರಯಾಣ ಮಾಡುತ್ತಿದ್ದರು. ಅತಿಯಾದ ವೇಗದಿಂದ ಸ್ಪೋರ್ಟ್ಸ್ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಗಾಡಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಶುಕ್ರವಾರ ಗಣೇಶ ಹಬ್ಬವಾದ್ದರಿಂದ ರಸ್ತೆಯಲ್ಲಿ ಹೆಚ್ಚು ವಾಹನಗಳು ಓಡಾಡುತ್ತಿರಲಿಲ್ಲ. ರಸ್ತೆ ಬಹುತೇಕ ಖಾಲಿ ಇತ್ತು. ಹೀಗಾಗಿ, ಅಪಘಾತದಲ್ಲಿ ಸಾಯಿ ಧರಮ್ ತೇಜ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಸಾಯಿ ಧರಮ್ ತೇಜ್ ಅವರ ತಲೆ, ಎದೆ ಭಾಗ, ಕೈಗಳಿಗೆ ಪೆಟ್ಟಾಗಿದೆ. ಬೈಕ್ ಚಾಲನೆ ವೇಳೆ ಸಾಯಿ ಧರಮ್ ತೇಜ್ ಹೆಲ್ಮೆಟ್ ಧರಿಸಿದ್ದರು. ಹೀಗಾಗಿ ಸಾಯಿ ಧರಮ್ ತೇಜ್ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿಲ್ಲ. ಸಾಯಿ ಧರಮ್ ತೇಜ್ ಮದ್ಯಪಾನ ಮಾಡಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳದ ಸಿಸಿಟಿವಿ ಫುಟೇಜ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವರದಿಗಳ ಪ್ರಕಾರ, ರಾಯದುರ್ಗಾ ಪೊಲೀಸರು ಸಾಯಿ ಧರಮ್ ತೇಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತಿ ವೇಗದ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಐಪಿಸಿ ಸೆಕ್ಷನ್ 336, ಮೋಟಾರು ವಾಹನ ಕಾಯ್ದೆ 184 ಅಡಿಯಲ್ಲಿ ಸಾಯಿ ಧರಮ್ ತೇಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಯಿ ಧರಮ್ ತೇಜ್ ಅವರ ಸ್ಸ್ಪೋರ್ಟ್ಸ್ ಬೈಕ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಸಾಯಿ ಧರಮ್ ತೇಜ್ ಅವರನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರನ್ನು ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆಸ್ಪತ್ರೆಯ ಐಸಿಯುನಲ್ಲಿ ಸದ್ಯ ಸಾಯಿ ಧರಮ್ ತೇಜ್ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!