Saturday, October 16, 2021
spot_img
Homeಸ್ಥಳೀಯ ಸುದ್ದಿಮತಾಂತರ ಕೇಂದ್ರದ ಮೇಲಿನ ದಾಳಿ ಸ್ವಾಗತಾರ್ಹ: ರತ್ನಾಕರ್ ಅಮೀನ್

ಮತಾಂತರ ಕೇಂದ್ರದ ಮೇಲಿನ ದಾಳಿ ಸ್ವಾಗತಾರ್ಹ: ರತ್ನಾಕರ್ ಅಮೀನ್

ಕಾರ್ಕಳ: ಅಮಾಯಕ ಹಿಂದೂಗಳನ್ನು ಹಣದ ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡುತ್ತಿದ್ದವರ ಮೇಲೆ ಹಿಂದೂ ಜಾಗರಣ‌ ವೇದಿಕೆಯ ಕಾರ್ಯಕರ್ತರು ನಡೆಸಿರುವ ದಾಳಿ ಸ್ವಾಗತಾರ್ಹ ಎಂದು ಹಿಂದೂ ಮುಖಂಡ ಹಾಗೂ ಕಾರ್ಕಳ ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್ ಹೇಳಿದ್ದಾರೆ. ಕುಕ್ಕುಂದೂರು ಗ್ರಾಮದ ನಕ್ರೆ ಎಂಬಲ್ಲಿನ ಪ್ರಗತಿ ಕಂಪೌಂಡ್ ಕಟ್ಟಡದಲ್ಲಿ ಪ್ರಾರ್ಥನೆಯ ನೆಪದಲ್ಲಿ ದುರ್ಬಲ ಮನಸ್ಸಿನ ಹಿಂದುಳಿದ ವರ್ಗದ ಹಾಗೂ ಪರಿಶಿಷ್ಟ ಸಮುದಾಯದ ಹಿಂದೂ ಬಾಂಧವರಿಗೆ ಹಣದ ಆಮಿಷದ ಮೂಲಕ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಯತ್ನ ನಡೆಸಿರುವುದು ಖಂಡನೀಯ, ಇಂತಹ ಘಟನೆಗಳು ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದು ಪೊಲೀಸರು ಇದನ್ನು ಮಟ್ಟಹಾಕಬೇಕಿದೆ. ಹಿಂದೂ ದೈವ ದೇವರುಗಳನ್ನು ಅವಹೇಳನ‌ ಮಾಡಿ, ಯಹೋವನು ಜಗತ್ತಿನ ದೇವರೆಂದು ಜನರಿಗೆ ಮಂಕುಬೂದಿ ಎರಚಿ ಅವರನ್ನು ಮತಾಂತರ ಮಾಡುವವರನ್ನು ತಕ್ಷಣವೇ ಬಂಧಿಸಬೇಕು, ಪ್ರಾರ್ಥನೆಯ ನೆಪದಲ್ಲಿ ಹಿಂದೂಗಳನ್ನು ಮತಾಂತರ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ‌ ಕ್ರಮ ಜರುಗಿಸಬೇಕು ಎಂದು ರತ್ನಾಕರ್ ಅಮೀನ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!