Wednesday, January 26, 2022
spot_img
Homeಸ್ಥಳೀಯ ಸುದ್ದಿಸಚಿವ ವಿ. ಸುನಿಲ್‌ ಕುಮಾರ್ ಪಡುಕುತ್ಯಾರ್‌ಗೆ ಭೇಟಿ

ಸಚಿವ ವಿ. ಸುನಿಲ್‌ ಕುಮಾರ್ ಪಡುಕುತ್ಯಾರ್‌ಗೆ ಭೇಟಿ

ಪಡುಕುತ್ಯಾರ್‌: ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಸೆ.10ರಂದು ಪಡುಕುತ್ಯಾರಿಗೆ ಭೇಟಿ ನೀಡಿದರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಪರಮಪೂಜ್ಯ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದರ್ಶನ ಪಡೆದು ಆಶೀರ್ವಾದ ಮಂತ್ರಾಕ್ಷತೆಯನ್ನು ಪಡೆದರು. ಮಹಾ ಸಂಸ್ಥಾನದ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವರು ಆನೆಗುಂದಿ ಮಹಾ ಸಂಸ್ಥಾನವು ವಿಶ್ವಬ್ರಾಹ್ಮಣ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಸಮಸ್ತ ಹಿಂದೂ ಸಮಾಜದ ಧಾರ್ಮಿಕ ಕೇಂದ್ರವಾಗಿ ಮೂಡಿಬರುತ್ತಿದೆ. ಪ್ರಸ್ತುತ ಹಿಂದೂ ಸಮಾಜದ ಹತ್ತಾರು ಚಟುವಟಿಕೆಗಳಿಗೆ ಸಾಧು-ಸಂತರ ನೇತೃತ್ವ ಅತೀ ಅಗತ್ಯ. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಆನೆಗುಂದಿ ಶ್ರೀಗಳವರು ತನ್ನದೇ ಆದ ರೀತಿಯಲ್ಲಿ ಹೊಸ ಮೆರುಗನ್ನು ಹೊಸ ರೂಪವನ್ನು ಕೋವಿಡ್ ಸಮಯದಲ್ಲೂ ನೀಡುತ್ತಿದ್ದಾರೆ. ದೇಶದ ಎಲ್ಲ ಭಕ್ತರ ಶ್ರದ್ಧಾ ಕೇಂದ್ರವಾಗಿ ಮುಂಬರುವ ದಿನಗಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಪ್ರತಿಷ್ಠಾನದ ಯೋಜನೆಗಳ ಬೇಡಿಕೆಗಳಿಗೆ ನನ್ನ ಧ್ವನಿಯನ್ನು ಸೇರಿಸಿ ಸರಕಾರದ ಮುಂದಿಡಲು ನೇತೃತ್ವವನ್ನು ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಕಾಪು ಶಾಸಕ ಲಾಲಾಜಿ ಮೆಂಡನ್, ನೇತಾರರಾದ ಸುರೇಶ್ ಶೆಟ್ಟಿ ಗುರ್ಮೆ, ಪ್ರಸಾದ್ ಶೆಟ್ಟಿ ಕುತ್ಯಾರು, ನವೀನ್ ಶೆಟ್ಟಿ ಕುತ್ಯಾರು, ರಾಜೇಶ್ ಶೆಟ್ಟಿ ಕುತ್ಯಾರು, ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ. ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಎಸ್. ವಿ. ಗಂಗಾಧರ ಆಚಾರ್ಯ ಉಡುಪಿ, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ, ಉಪಾಧ್ಯಕ್ಷ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ನಿಟ್ಟೆ ಸುರೇಶ್ ಆಚಾರ್ಯ ಕಾರ್ಕಳ, ಪಿ.ವಿ. ಅಚ್ಯುತ ಆಚಾರ್ಯ ಉಡುಪಿ, ರವಿ ಆಚಾರ್ಯ ಕಾರ್ಕಳ, ಹರೀಶ್ ಆಚಾರ್ಯ ಕಾರ್ಕಳ, ಲೋಲಾಕ್ಷ ಶರ್ಮಾ ಕಟಪಾಡಿ, ರತ್ನಾಕರ ಆಚಾರ್ಯ ರತ್ನಾಕರ ಆಚಾರ್ಯ ಕಟ್ಟೆಮಾರ್ ಕಾರ್ಕಳ, ಆಚಾರ್ಯ ಕುತ್ಯಾರು, ಅಶೋಕ್ ಆಚಾರ್ಯ ಕುತ್ಯಾರು, ಎಂ.ಪಿ. ಮೋಹನ ಆಚಾರ್ಯ ಉಡುಪಿ, ನವೀನ್ ಆಚಾರ್ಯ ಪಣಿಯೂರು ಮುಂತಾದವರು ಉಪಸ್ಥಿತರಿದ್ದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!