Saturday, September 25, 2021
spot_img
Homeಸ್ಥಳೀಯ ಸುದ್ದಿಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ದಾಳಿ ಪ್ರಕರಣ

ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ದಾಳಿ ಪ್ರಕರಣ

ದೂರು -ಪ್ರತಿ ದೂರು ದಾಖಲು

ಕಾರ್ಕಳ : ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕುಕ್ಕುಂದೂರು ಗ್ರಾಮದ ನಕ್ರೆ ಮತಾಂತರ ಕೇಂದ್ರಕ್ಕೆ ಶುಕ್ರವಾರ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಸಂಘಟನೆಯ ಕಾರ್ಯಕರ್ತರು ಹಾಗೂ ಅಕ್ರಮವಾಗಿ ಮತಾಂತರದಲ್ಲಿ ತೊಡಗಿಸಿಕೊಂಡಿದ್ದ ಹಾಳೆಕಟ್ಟೆಯ ಬೆನೆಡಿಕ್ಟ್ ಸಹಿತ ಹಲವರ ವಿರುದ್ಧ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ಕುಂಟಾಡಿಯ ಸುನೀಲ್ಎಂಬವರು ಈ ಕುರಿತು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು, ಆರ್ಥಿಕವಾಗಿ ಸ್ವಲ್ಪ ಸಮಸ್ಯೆಯಲ್ಲಿ ಇದ್ದುದನ್ನು ತಿಳಿದು ಬೆನೆಡಿಕ್ಟ್ ಎಂಬವರು 2 ತಿಂಗಳ ಹಿಂದೆ ಬಸ್ ಸ್ಟ್ಯಾಂಡ್ ನಲ್ಲಿ ಭೇಟಿಯಾಗಿ ವಿಚಾರಿಸಿ ಹೋಗಿದ್ದು ನಂತರ ಬೆನೆಡಿಕ್ಟ್ ಮತ್ತು ಇನ್ನೊರ್ವರು ಮನೆಗೆ ಬಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಎಲ್ಲ ಕಷ್ಟಗಳು ಪರಿಹಾರವಾಗುವುದು. ಹಿಂದೂ ಧರ್ಮದಲ್ಲಿ ಸಾವಿರಾರು ದೇವರುಗಳಿರುತ್ತಾರೆ. ನೂರಾರು ಜಾತಿ, ಮೇಲು ಕೀಳೆಂಬ ಭೇದವಿದೆ. ಹಿಂದೂ ಧರ್ಮ ಮತ್ತು ದೇವರುಗಳ ಬಗ್ಗೆ ಅಪಹಾಸ್ಯ ಮತ್ತು ನಿಂದನೆ ಮಾಡಿದಲ್ಲದೆ ಕ್ರೈಸ್ತ ಧರ್ಮದ ದೇವರನ್ನು ಪೂಜಿಸಿ ಎಂದು ಸಣ್ಣ ಶಿಲುಬೆಯನ್ನು ನೀಡಿರುತ್ತಾನೆ.
ಶುಕ್ರವಾರ ನಕ್ರೆ ಪ್ರದೇಶದಲ್ಲಿರುವ ಒಂದು ಮನೆಗೆ ಬರಲು ತಿಳಿಸಿದಲ್ಲದೇ ಗಣಪತಿ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುತ್ತಾರೆ. ಅವರ ಮಾತನ್ನು ನಂಬಿ ಬೆಳಗ್ಗೆ 09-30 ಗಂಟೆಗೆ ಕುಕ್ಕೂಂದೂರು ಗ್ರಾಮದ ನಕ್ರೆಯಲ್ಲಿರುವ ಬೆನೆಡಿಕ್ಟ್ ತಿಳಿಸಿದ ಮನೆಗೆ ಹೋದಾಗ ಅಲ್ಲಿ ಪಿರ್ಯಾದಿದಾರರ ಹಾಗೆಯೇ ಇನ್ನೂ 50- 60 ಜನ ಸೇರಿದ್ದು ಬೆನೆಡಿಕ್ಟ್ ಹಿಂದು ಧರ್ಮ ಮತ್ತು ದೇವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಲ್ಲದೇ ಕ್ರೈಸ್ತ ಧರ್ಮವನ್ನು ಸರ್ವಶ್ರೇಷ್ಠ ಎಂದು ಹೇಳಿರುತ್ತಾನೆ. ಹಿಂದು ಸಮಾಜ, ಜಾತಿ ದೈವ ದೇವರು ಕುರಿತು ನಿಂದನಾರ್ಹ ಪದ ಬಳಕೆ ಮಾಡಿರುತ್ತಾನೆ ಎಂದು ದೂರಿನಲ್ಲಿ ಸುನಿಲ್‌ ತಿಳಿಸಿದ್ದಾರೆ.

ಬೆನಡಿಕ್ಟ್ ದೂರು
ಹಾಳೆಕಟ್ಟೆ ನಿವಾಸಿ ಬೆನಡಿಕ್ಟ್‌ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದು, ಸುಮಾರು 25ರಿಂದ 30 ಜನ ಮಂದಿ ಹಿಂದು ಪರ ಸಂಘಟನೆ ಕಾರ್ಯಕರ್ತರು ಸೆ. 10ರಂದು ಕುಕ್ಕುಂದೂರು ಗ್ರಾಮದ ನಕ್ರೆ ಬಳಿ ಕೆಎಸಿಇಎಸ್ ಎಂಬ ಸಂಸ್ಥೆ ವತಿಯಿಂದ ನಡೆಸುವ ಪ್ರಗತಿ ಟ್ರಸ್ಟ್‌ನಲ್ಲಿ ಇತರೇ ವ್ಯಕ್ತಿಗಳೊಂದಿಗೆ ಸೇರಿ ಪ್ರಾರ್ಥನೆ ನಡೆಸುತ್ತಿರುವ ಸಂದರ್ಭ ಅಕ್ರಮ ಪ್ರವೇಶ ಮಾಡಿರುತ್ತಾರೆ. ಪ್ರಾರ್ಥನೆ ನಡೆಸುತ್ತಿದ್ದ ಹೆಂಗಸರು, ಗಂಡಸರು ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!