Wednesday, January 26, 2022
spot_img
Homeಸ್ಥಳೀಯ ಸುದ್ದಿಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿನ ಈಜುಕೊಳದಲ್ಲಿ ಈಜು ತರಬೇತಿ ಆರಂಭ

ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿನ ಈಜುಕೊಳದಲ್ಲಿ ಈಜು ತರಬೇತಿ ಆರಂಭ


ಕಾರ್ಕಳ : ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಬಳಿಯಿರುವ ತಾಲೂಕು ಕ್ರೀಡಾಂಗಣದಲ್ಲಿನ ಈಜುಕೊಳ ಸಾರ್ವಜನಿಕರಿಗೆ ಮುಕ್ತವಾಗಿದ್ದು, ತರಬೇತಿ ಆರಂಭಗೊಂಡಿದೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅನುದಾನ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈಜುಕೊಳ 2020 ಆಗಸ್ಟ್‌ನಲ್ಲಿ ಉದ್ಘಾಟನೆಗೊಂಡಿತ್ತು. ಅನಂತರ ಲಾಕ್‌ ಡೌನ್‌ ಕಾರಣದಿಂದ ಸಾರ್ವಜನಿಕರಿಗೆ ಈಜುಕೊಳ ನಿರ್ಬಂಧಿಸಲಾಗಿತ್ತು. 54 ಅಡಿ ಅಗಲ, 82 ಅಡಿ ಉದ್ದವಿರುವ 3-5 ಅಡಿ ಆಳ ಹೊಂದಿರುವ ಈ ಈಜುಕೊಳದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಮಾಡಿದ್ದರು.
ಲೈಫ್‌ ಗಾರ್ಡ್‌, ನುರಿತ ತರಬೇತಿದಾರರಿಂದ ತರಬೇತಿ ನೀಡಲಾಗುತ್ತಿದೆ. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಈಜು ಸ್ಪರ್ಧೆಗಳಿಗೆ ತರಬೇತಿ ನೀಡಲಾಗುವುದು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಈಜುಕೊಳ ಉಪಯೋಗಿಸಬಹುದಾಗಿದ್ದು, ಮಹಿಳೆಯರಿಗೆ ಪತ್ಯೇಕ ಬ್ಯಾಚ್‌, ಮಕ್ಕಳಿಗೆ ಪ್ರತ್ಯೇಕ ಈಜುಕೊಳದ ವ್ಯವಸ್ಥೆಯಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ರಿತೇಶ್‌ ಶೆಟ್ಟಿ ತಿಳಿಸಿದ್ದಾರೆ.

ಸಮಯ
ಬೆಳಿಗ್ಗೆ 6ರಿಂದ 11, ಅಪರಾಹ್ನ 3ರಿಂದ 7 ತರಬೇತಿ ನೀಡಲಾಗುವುದು.

ಸಂಪರ್ಕ ಸಂಖ್ಯೆ
ರಿತೇಶ್‌ ಶೆಟ್ಟಿ : 9448770165
ದಿನೇಶ್‌ : 9591514055
ಆಶಿಕ್‌ : 9380807348

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!