Thursday, December 2, 2021
spot_img
HomeUncategorizedನಿಟ್ಟೆ : ಹಟ್ಟಿಯಿಂದ ಗೋ ಕಳ್ಳತನ

ನಿಟ್ಟೆ : ಹಟ್ಟಿಯಿಂದ ಗೋ ಕಳ್ಳತನ

ಗೋಕಳ್ಳರನ್ನು ಬಂಧಿಸುವಂತೆ ಸುನಿಲ್‌ ಕೆ.ಆರ್. ಆಗ್ರಹ‌

ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ ಲೆಮಿನಾ ಕ್ರಾಸ್, ದುರ್ಗಾ ಹೋಟೆಲ್ ಬಳಿಯ ರಾಜೇಶ್ ಆಚಾರ್ಯ ಎಂಬವರ ಮನೆಯ ಹಟ್ಟಿಯಿಂದ ಸೆ. 9ರ ತಡರಾತ್ರಿ ಮೂರು ದನಗಳನ್ನು ಕದ್ದೊಯ್ದ ಪ್ರಕರಣ ನಡೆದಿದೆ. ರಾಜೇಶ್‌ ಆಚಾರ್ಯ ಅವರು ಮನೆಯ ಗೋವುಗಳೊಂದಿಗೆ, ರಸ್ತೆ ಬದಿಯಲ್ಲಿರುವ ಇತರ ಗೋವುಗಳಿಗೆ ಕೂಡ ಆಹಾರ, ನೀರು ನೀಡುತ್ತಿದ್ದರು. ಗುರುವಾರ ತಡರಾತ್ರಿ ಗೋಕಳ್ಳರು ತಲವಾರು ಜಳಪಿಸಿ ಮೂರು ದನಗಳನ್ನು ಹಗ್ಗ ತುಂಡು ಮಾಡಿ ಕಳ್ಳತನ ಮಾಡಿರುತ್ತಾರೆ ಎಂದು ರಾಜೇಶ್‌ ಆಚಾರ್ಯ ತಿಳಿಸಿದ್ದಾರೆ.

ಗೋಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಭಜರಂಗದಳ ಸಂಚಾಲಕ ಸುನಿಲ್‌ ಕೆ.ಆರ್.‌ ಆಗ್ರಹಿಸಿದ್ದಾರೆ. ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾರ್ಕಳ ತಾಲೂಕಿನಾದ್ಯಂತ ಕೃಷಿಕರ ಜೀವನಕ್ಕೆ ಆಧಾರವಾಗಿರುವ ಗೋವುಗಳನ್ನುಕಳ್ಳತನ ಮಾಡಲಾಗುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಇದ್ದರೂ ನಿರಂತರವಾಗಿ ಗೋಕಳ್ಳತನವಾಗುತ್ತಿರುವುದು ಆತಂಕದ ವಿಚಾರ. ಗೋಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾರ್ಕಳ ತಾಲೂಕು ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿ ಸುಧೀರ್ ನಿಟ್ಟೆ, ತಾಲೂಕು ಗೋರಕ್ಷಾ ಪ್ರಮುಖ್ ಪ್ರಸಾದ್ ನಿಟ್ಟೆ, ಆತ್ಮಾನಂದ, ಪ್ರಣಯ್ ಶೆಟ್ಟಿ ಸೇರಿದಂತೆ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗ ದಳ ಕಾರ್ಯಕರ್ತರು ರಾಜೇಶ್‌ ಆಚಾರ್ಯ ಮನೆಗೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!