Wednesday, January 26, 2022
spot_img
HomeUncategorizedಆಸ್ತಿ ಖರೀದಿ- ಕಾನೂನು ಮಾಹಿತಿ

ಆಸ್ತಿ ಖರೀದಿ- ಕಾನೂನು ಮಾಹಿತಿ

ಆಸ್ತಿ (ಜಮೀನು)ಗೆ ಸಮ್ಮಂಧಿಸಿದಂತೆ ಖರೀದಿ ವ್ಯವಹಾರದ ಸಂದರ್ಭದಲ್ಲಿ ಖರೀದಿದಾರರು ವ್ಯವಹಾರಕ್ಕೆ ಸಮ್ಮಂಧಪಟ್ಟ ಆರ್. ಟಿ. ಸಿ. ತೀರ್ವೆ ವಗೈರೆ ಕಂದಾಯ ದಾಖಲೆಗಳಿಗೆ ಮಾತ್ರ ಅವಲಂಬಿತರಾಗಕೂಡದು. ಯಾವುದೇ ಸ್ತಿರಾಸ್ತಿಯ ಮಾಲಿಕತ್ವದ ಹಕ್ಕನ್ನು ಕೇವಲ ಆರ್. ಟಿ. ಸಿ. ಅಥವಾ ದಾಖಲೆಗಳ ಆಧಾರದಲ್ಲಿ ನಿರ್ಧರಿಸಲು ಆಗುವುದಿಲ್ಲ. ಕಂದಾಯ ದಾಖಲೆಗಳು ಸ್ತಿರಾಸಿಗಳ ಮಾಲಿಕತ್ವವನ್ನು ರುಜುವಾತು ಪಡಿಸುವ ದಾಖಲೆಗಳಾಗಿರುವುದಿಲ್ಲ. ಅವು ಕೇವಲ ತೀರ್ವೆ ವಸೂಲಿ ಮತ್ತಿತರ ಸೀಮಿತ ಉದ್ದೇಶಕ್ಕೆ ಒಳಪಟ್ಟ ಕಂದಾಯ ದಾಖಲೆಗಳಾಗಿರುತ್ತದೆ. ಆದ್ದರಿಂದ ಯಾವುದೇ ಸ್ತಿರಾಸ್ತಿ ಖರೀದಿ ಸಂದರ್ಭದಲ್ಲಿ ಮಾರಾಟಗಾರರಿಗೆ ಯಾವ ರೀತಿಯ ಎಷ್ಟು ಅಂಶದ ಮಾಲಿಕತ್ವದ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುದಕ್ಕಾಗಿ ಅಂತಹ ಸ್ತಿರಾಸ್ತಿಗೆ ಸಮ್ಮಂದಪಟ್ಟ ಮೂಲ ದಾಖಲೆಗಳನ್ನು ( ಟೈಟಲ್ ಡೀಡ್) ಪರಿಶೀಲಿಸಿ ಮಾರಾಟಗಾರರು ಹೊಂದಿರಬಹುದಾದ ಮತ್ತು ಅವರು ತಿಳಿಸಿರುವ ಮಾಲಿಕತ್ವದ ಹಕ್ಕಿನ ಕುರಿತು ಯಾವುದೇ ಸೂಕ್ತ ಕಾನೂನು ತಜ್ಞರಿಂದ (ವಕೀಲರಿಂದ) ಸೂಕ್ತ ಲಿಖಿತ ಸಲಹೆ (ಲೀಗಲ್ ಒಪೀನಿಯನ್) ಪಡೆಯುವುದು ಒಳ್ಳೆಯದು. ಖರೀದಿಸಲು ಇಚ್ಚಿಸಿರುವ ಜಮೀನಿನ ಋಣಭಾರ ಪ್ರಮಾಣಪತ್ರವನ್ನು ಋಣಭಾರ (ಇ.ಸಿ.) ಸಂಬಂಧಪಟ್ಟ ನೋಂದಣಾಧಿಕಾರಿಯವರ ಕಚೇರಿಯಿಂದ ಪಡೆದು ಪರಿಶೀಲಿಸುವುದರಿಂದ ಸಂಬಂಧಪಟ್ಟ ಆಸ್ತಿಯ ಮೇಲಿನ ಸಾಲ, ಜವಾಬ್ದಾರಿ, ಕಾನೂನು ಬದ್ಧ ಅಡ್ಡಿ ಆತಂಕಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬಹುದು. ಇಲ್ಲವಾದಲ್ಲಿ ಆಸ್ತಿ ಖರೀದಿಸುವಾತ ಇವೆಲ್ಲಕ್ಕೂ ಹೊಣೆಗಾರನಾಗುತ್ತಾನೆ. ಒಂದು ವೇಳೆ ಆಸ್ತಿ ಖರೀದಿಸುವಾತ ಮಾರಾಟಗಾರರಿಗೆ ಕ್ರಯಪ್ರತಿಫಲದ ಮೊತ್ತ ಅಥವಾ ಅದರ ಅಂಶವನ್ನು ಮುಂಗಡವಾಗಿ ನೀಡುವ ಸಂದರ್ಭ ಈ ಬಗ್ಗೆ ಸೂಕ್ತ ಎಗ್ರಿಮೆಂಟನ್ನು ಹಣ ಪಾವತಿ ರಶೀದಿಯೊಂದಿಗೆ ಮಾಡಿಕೊಳ್ಳಬೇಕು.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681
>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!