Tuesday, December 7, 2021
spot_img
Homeಸ್ಥಳೀಯ ಸುದ್ದಿಸಚಿವ ಸುನಿಲ್‌ ಕುಮಾರ್‌ ಕಾರ್ಕಳ ಪುರಸಭೆಗೆ ಭೇಟಿ

ಸಚಿವ ಸುನಿಲ್‌ ಕುಮಾರ್‌ ಕಾರ್ಕಳ ಪುರಸಭೆಗೆ ಭೇಟಿ

ಪುರಸಭೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ- ಸುನಿಲ್‌ ಕುಮಾರ್‌

ಕಾರ್ಕಳ : ಪುರಸಭೆಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಗುರುತಿಸುವಂತೆ ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. ಸೆ. 9ರಂದು ಕಾರ್ಕಳ ಪುರಸಭೆಗೆ ಭೇಟಿ ನೀಡಿದ ಅವರು ನೂತನ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ 10 ವರ್ಷದ ದೂರದೃಷ್ಟಿಯನ್ನಿಟ್ಟುಕೊಂಡು, ಪಾರ್ಕಿಂಗ್‌ಗೆ ಸ್ಥಳಾವಕಾಶವಿರುವ ಜಾಗವನ್ನು ಪುರಸಭೆ ಗುರುತಿಸುವ ಕಾರ್ಯ ಮಾಡಬೇಕೆಂದರು.

ಸನ್ಮಾನ
ಕೋವಿಡ್‌ ಸಂದರ್ಭದಲ್ಲಿ ಶ್ರಮಿಸಿದ ಪೌರಕಾರ್ಮಿಕರ ಪರವಾಗಿ ಪೌರಕಾರ್ಮಿಕರ ಸಂಘದ ಅ‍ಧ್ಯಕ್ಷ ವಸಂತ ಅವರ ಸಚಿವರು ಸನ್ಮಾನಿಸಿದರು.

ಮನವಿ
ಪುರಸಭಾ ವ್ಯಾಪ್ತಿಯ ರಸ್ತೆ ಅಭಿವೃಧ್ಧಿಗೆ ಅನುದಾನ, ನೂತನ ಕಟ್ಟಡ ನಿರ್ಮಾಣ, ಹವಾಲ್ದಾರುಬೆಟ್ಟುವಿನಲ್ಲಿ ಸೋಲಾರ್‌ ಪ್ಲಾಂಟ್‌ ನಿರ್ಮಾಣಕ್ಕೆ ಅನುದಾನ, ಖಾಲಿ ಇರುವ ಸಿಬ್ಬಂದಿ ಭರ್ತಿಗೊಳಿಸುವಂತೆ ಪುರಸಭೆ ವತಿಯಿಂದ ಸಚಿವರಿಗೆ ಮನವಿ ಮಾಡಲಾಯಿತು. ಕಾಂಗ್ರೆಸ್‌ ಸದಸ್ಯರು, ಬಿಜೆಪಿ ಸದಸ್ಯರು, ಪೌರಕಾರ್ಮಿಕರು ಮನವಿ ನೀಡಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!