Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಗ್ರಂಥಾಲಯ ಮೇಲ್ದರ್ಜೆಗೆ -ಸುನಿಲ್‌ ಕುಮಾರ್‌

ಕಾರ್ಕಳ ಗ್ರಂಥಾಲಯ ಮೇಲ್ದರ್ಜೆಗೆ -ಸುನಿಲ್‌ ಕುಮಾರ್‌

ಉಡುಪಿ, ಕಾರ್ಕಳದಲ್ಲಿ ಕನ್ನಡ ಭವನ ನಿರ್ಮಾಣ

ಕಾರ್ಕಳ :  ಸಚಿವನಾದ ಸಂದರ್ಭ ಹಾರ ತುರಾಯಿ ಬದಲು ಪುಸ್ತಕ ನೀಡಿ ಎಂಬ ವಿನಂತಿ ಮೇರೆಗೆ ನಿರೀಕ್ಷೆಗೂ ಮೀರಿ ಪುಸ್ತಕ ದೊರೆತಿದೆ. ಇದೀಗ ಎಲ್ಲೆಡೆಯೂ ಹಾರದ ಬದಲು ಪುಸ್ತಕವನ್ನು ನೀಡುವ ಮೂಲಕ ಮನಸ್ಸಿನಲ್ಲಿದ್ದ ಪುಸ್ತಕ ಪ್ರೇಮ ಪ್ರಕಟವಾಗುವಂತಾಗಿದೆ. ಪುಸ್ತಕ ಪ್ರೇಮವೇ ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ದೊರೆಯುಂತಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಅವರು ಸೆ. 9ರಂದು ಕಾರ್ಕಳ ವಿಕಾಸ ಕಚೇರಿಯಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಕಳ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಲಾಗುವುದು. ಉಡುಪಿ ಹಾಗೂ ಕಾರ್ಕಳದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ತಾಲೂಕು ಗ್ರಂಥಾಲಯ ಮಾತ್ರವಲ್ಲದೇ ಗ್ರಾಮ ಪಂಚಾಯತ್‌ ಮತ್ತು ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದ ಪುಸ್ತಕವನ್ನು ಕಾಲೇಜು, ಶಾಲೆಗಳಿಗೆ ವಿತರಿಸಲಾಗುವುದು. ದ.ಕ., ಉಡುಪಿ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಉಂಟಾದ ಕೊರತೆ ನೀಗಿಸಲಾಗುವುದು. ತಿಂಗಳಿಗೊಂದರಂತೆ ಪುಸ್ತಕ, ಚಲನಚಿತ್ರ ನೋಡುವ ಪರಿಪಾಠ ಬೆಳೆಸಿಕೊಂಡಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲೂ ಸಹಕಾರಿಯಾಗುವುದು ಎಂದು ಸಚಿವರು ಅಭಿಪ್ರಾಯಪಟ್ಟರು.

ಟ್ರಸ್ಟ್‌ ಸ್ಥಾಪನೆಯಾಗಲಿ
ಹಿರಿಯ ಸಾಹಿತ್ಯ ನಾ. ಮೊಗಸಾಲೆ ಅವರು ಮಾತನಾಡಿ, ಕರಾವಳಿ ಭಾಗದ ಸಾಹಿತಿಗಳ ಹೆಸರಲ್ಲಿ ಟ್ರಸ್ಟ್‌ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕಲ್ಕೂರು, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿ, ಶಿಕ್ಷಕರಾದ ರಾಜೇಂದ್ರ ಭಟ್‌ ಕೆ. ಕಾರ್ಯಕ್ರಮ ನಿರೂಪಿಸಿ, ಗಣೇಶ್‌ ಜಾಲ್ಸೂರು ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!