Wednesday, January 19, 2022
spot_img
Homeಸ್ಥಳೀಯ ಸುದ್ದಿಕಾರ್ಕಳ ವಲಯ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮಹಾಸಭೆ

ಕಾರ್ಕಳ ವಲಯ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮಹಾಸಭೆ

ಕಾರ್ಕಳ : ಕಾರ್ಕಳ ವಲಯ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ನ 26ನೇ ವಾರ್ಷಿಕ ಮಹಾಸಭೆಯು ಸೆ. 6ರಂದು ಹೋಟೆಲ್ ಪ್ರಕಾಶ್ ಜರಗಿತು. ಎಸ್‌ಕೆಪಿಎ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಾರ್ಕಳ ವಲಯ ಫೋಟೋ ಗ್ರಾಫರ್ಸ್‌ ಅಸೋಸಿಯೇಶನ್‌ ಹತ್ತಾರು ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಕೋವಿಡ್‌ ಕಾರಣದಿಂದ ಫೋಟೋಗ್ರಾಫರ್ಸ್‌ಗೂ ದೊಡ್ಡ ಪ್ರಮಾಣದಲ್ಲಿ ಹೊಡೆತವಾಗಿದೆ. ಸ್ಮೈಲ್‌ ಪ್ಲೀಸ್ ಅನ್ನುವವರ ಬದುಕಿನಲ್ಲೂ ಸ್ಮೈಲ್‌ ಇಲ್ಲದಂತಾಗಿದೆ ಎಂದರು. ಕಾರ್ಕಳ ವಲಯಾಧ್ಯಕ್ಷ ಭಾಸ್ಕರ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರಸಾದ್ ಐಸಿರ, ವಲಯದ ಗೌರವಾಧ್ಯಕ್ಷ ಪದ್ಮಪ್ರಸಾದ ಜೈನ್, ವಲಯ ಕಾರ್ಯದರ್ಶಿ ಸೀತಾರಾಮ್, ಉಪಾಧ್ಯಕ್ಷರಾದ ಈಶ್ವರ್ ಕುಂಟಾಡಿ, ಗಣೇಶ್ ಭಟ್, ಕೋಶಾಧಿಕಾರಿ ಯೋಗೀಶ್, ಸಾಂಸ್ಕ್ರತಿಕ ಕಾರ್ಯದರ್ಶಿ ವಿಠಲ್ ಅಮೀನ್, ಪ್ರಮೋದ್ ಚಂದ್ರ ಪೈ, ರಾಜ ಅಯ್ಯಂಗಾರ್, ಎಸ್‌ಕೆಪಿಎ ವಿವಿದ್ಧೋದ್ದೇಶ ಬ್ಯಾಂಕ್ ನ ನಿರ್ದೇಶಕ ದತ್ತಾತ್ರೇಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರೀಶ್‌ ಸ್ವಾಗತಿಸಿ, ವಿಶ್ವಾಸ್‌ ಡೋಂಗ್ರೆ ನಿರೂಪಿಸಿದರು. ಸೀತಾರಾಮ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!