Wednesday, January 26, 2022
spot_img
Homeಸ್ಥಳೀಯ ಸುದ್ದಿಗುರುವಿನಲ್ಲೇ ದೇವರನ್ನು ಕಾಣುವ ಪರಂಪರೆ ನಮ್ಮದು : ಚಿತ್ತರಂಜನ್‌ ಶೆಟ್ಟಿ

ಗುರುವಿನಲ್ಲೇ ದೇವರನ್ನು ಕಾಣುವ ಪರಂಪರೆ ನಮ್ಮದು : ಚಿತ್ತರಂಜನ್‌ ಶೆಟ್ಟಿ

ಕಾರ್ಕಳ : ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಗೌರವದ ಸ್ಥಾನವಿದೆ. ಗುರುವಿನಲ್ಲೇ ದೇವರನ್ನು ಕಾಣುವ ಪರಂಪರೆ ನಮ್ಮದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದು ಜೇಸಿಸ್‌ ಶಾಲಾ ಅಧ್ಯಕ್ಷ ಚಿತ್ತರಂಜನ್‌ ಶೆಟ್ಟಿ ಹೇಳಿದರು.
ಅವರು ಸೆ. 5ರಂದು ಜೇಸಿಸ್‌ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೃಜನಶೀಲ ಶಿಕ್ಷಕರಿಂದ ಹೊಸತನ ಆವಿಷ್ಕರಿಸಲು ಸಾಧ್ಯ. ಹೊಸ ವಿಚಾರಗಳನ್ನು ಸ್ವೀಕರಿಸುವಲ್ಲಿ ಶಿಕ್ಷಕರ ಹೃದಯ ಸದಾ ತೆರೆದಿರಬೇಕು. ಯಾವುದೇ ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ಸಾಧ್ಯವಾಗುವುದು ಅಲ್ಲಿ ಗುಣಮಟ್ಟದ ಶಿಕ್ಷಕರಿದ್ದಾಗ ಮಾತ್ರ ಎಂದವರು ಅಭಿಪ್ರಾಯಪಟ್ಟರು.
ಶಾಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಮುಖ್ಯಶಿಕ್ಷಕಿ ಸುರೇಖಾ ರಾಜ್, ಕಾರ್ಕಳ ಜೆಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ದಿನೇಶ್ ನಾಯಕ್,‌ ಸುಜಾತ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!