Wednesday, January 26, 2022
spot_img
Homeಸ್ಥಳೀಯ ಸುದ್ದಿಗೋಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಡಿವೈಎಸ್‌ಪಿಗೆ ದೂರು

ಗೋಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಡಿವೈಎಸ್‌ಪಿಗೆ ದೂರು

5 ದಿನದೊಳಗಾಗಿ ಗೋಕಳ್ಳರ ಪತ್ತೆಯಾಗದಿದ್ದಲ್ಲಿ ಬೃಹತ್ ಪ್ರತಿಭಟನೆ

ಕಾರ್ಕಳ : ಶಿರ್ಲಾಲು ಗ್ರಾಮದ ಹಲವು ಮನೆಗಳ ಹಟ್ಟಿಗೆ ನುಗ್ಗಿ ಆಯುಧ ಹಿಡಿದುಕೊಂಡು ಗೋ ಹಂತಕರು ಹಾಡುಹಗಲೇ ಗೋವು ಕಳವು ಮಾಡುತ್ತಿರುವುದು ಘೋರ ಪ್ರಕರಣವಾಗಿದ್ದು, ಹಿಂದು ಸಮಾಜಕ್ಕೆ ಗೋ ಕಳ್ಳರು ಸವಾಲು ಹಾಕುವಂತಿದೆ. ಕೃಷಿಕರ ಜೀವನಾಡಿ ಗೋವುಗಳನ್ನು ಹಟ್ಟಿಯಿಂದ, ಗೋಶಾಲೆಯಿಂದ ಕಳ್ಳತನ ಮಾಡುವ ಜೊತೆಗೆ ತಲವಾರು ಜಳಪಿಸಿ ಗೋ ಸಾಕುವವರನ್ನು ಬೆದರಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳುವಂತೆ ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್‌ ಅವರಿಗೆ ಸೆ. 9ರಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಕಾರ್ಕಳ ತಾಲೂಕಿನ ಶಿರ್ಲಾಲು ಮತ್ತು ಕೆರ್ವಾಶೆ ಗ್ರಾಮದಲ್ಲಿ ಹಲವಾರು ಮನೆಯ ಹಟ್ಟಿಗೆ ನುಗ್ಗಿ ದನ ಕಳ್ಳತನವಾಗಿರುವ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇಸು ದಾಖಲಾಗಿ 2 ದಿನವಾದರೂ ಪೊಲೀಸ್ ಇಲಾಖೆಯಿಂದ ಯಾವೊಬ್ಬರೂ ಆ ಮನೆಗೆ ಭೇಟಿ ನೀಡಿ ವಿಚಾರಿಸಿಲ್ಲ. ಇದು ಅನುಮಾನಕ್ಕೆ ಎಡೆಮಾಡುವಂತಿದೆ. ಗೋ ಕಳ್ಳರ ವಿರುದ್ಧ ಕ್ರಮಕೈಗೊಳ್ಳದೇ ಗೊಕಳ್ಳತನ ನಡೆಸಲು ಪೊಲೀಸರೇ ನೇರ ಪ್ರೇರಣೆ ಕೊಟ್ಟಂತಿದೆ. ಪೋಲಿಸ್ ಇಲಾಖೆಗೆ ಹಲವಾರು ಭಾರಿ ಮನವಿ ಮಾಡಿಕೊಂಡರೂ ನ್ಯಾಯ ಸಿಗಲಿಲ್ಲ. ಗೋ ಕಳ್ಳತನ ಎಂದಿನಂತೆ ಮುಂದುವರಿಯುತ್ತಿದ್ದು, 5 ದಿನದೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದರೇ ಕಾರ್ಕಳ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್‌ ನಾಯಕ್‌, ಜಿಲ್ಲಾ ಭೂ ಸುರಕ್ಷಾ ರಮೇಶ್‌ ಕಲ್ಲೊಟ್ಟೆ, ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ನಾರಾವಿ,‌ ಸುಭಾಷ್ ಬೋಳ, ಹರೀಶ್‌ ಬಜಗೋಳಿ, ಜಿಲ್ಲಾ ನಿಧಿ ಪ್ರಮುಖ್ ಉಮೇಶ್ ನಾಯ್ಕ್ ಸೂಡ, ಸುಜಿತ್‌‌ ಸಫಲಿಗ, ಪ್ರಾಣೇಶ್‌, ಸುಭಾಶ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!