Tuesday, September 28, 2021
spot_img
Homeಸ್ಥಳೀಯ ಸುದ್ದಿಮಹಿಳಾ ಸಾಂತ್ವನ ಕೇಂದ್ರ ಮುಚ್ಚುವ ಸರಕಾರದ ನಿರ್ಧಾರ ವಿಷಾದನೀಯ-ಬಿಪಿನ್‌ ಚಂದ್ರ ಪಾಲ್‌

ಮಹಿಳಾ ಸಾಂತ್ವನ ಕೇಂದ್ರ ಮುಚ್ಚುವ ಸರಕಾರದ ನಿರ್ಧಾರ ವಿಷಾದನೀಯ-ಬಿಪಿನ್‌ ಚಂದ್ರ ಪಾಲ್‌

ಕಾರ್ಕಳ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ನಿರ್ದೇಶನದಡಿಯಲ್ಲಿ ಮಹಿಳೆಯರ ಅಭ್ಯುದಯದ ಗುರಿಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರಕಾರ ಆರ್ಥಿಕ ಸಂಕಷ್ಟದ ಕಾರಣ ನೀಡಿ ಮುಚ್ಚುವ ಆದೇಶ ಹೊರಡಿಸಿರುವುದು ವಿಷಾದನೀಯ. ಇದು ಆಳುವ ಬಿಜೆಪಿ ಸರಕಾರದ ಮಹಿಳಾ ವಿರೋಧಿ ಧೋರಣೆಗೆ ಸಾಕ್ಷಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿಪಿನ್‌ ಚಂದ್ರ ಪಾಲ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸರಕಾರದ ಬೇಜವಾಬ್ದಾರಿ

ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಮೊದಲಾದ ವೈಯಕ್ತಿಕ ಸಮಸ್ಯೆಗಳನ್ನು ತಮ್ಮ ಆತ್ಮ ಗೌರವದ ಪ್ರಶ್ನೆಯಾಗಿ ಪರಿಗಣಿಸಿ ಆರಕ್ಷಕ ಠಾಣೆಗಳಿಗೆ ದೂರು ನೀಡಲು ಹಿಂಜರಿಯುತ್ತಿದ್ದ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳು ನ್ಯಾಯ ಒದಗಿಸಿ ಬದುಕು ಕಟ್ಟಿ ಕೊಡುತ್ತಿದ್ದವು. ಪ್ರಕರಣದ ಆದ್ಯತೆ ಮತ್ತು ಅಗತ್ಯತೆಯನ್ನು ಅನುಲಕ್ಷಿಸಿ ಸಂತ್ರಸ್ತರಿಗೆ 10 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿತ್ತು. ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ಸರಕಾರದ ನಡೆ ಬೇಜವಾಬ್ದಾರಿತನದ್ದು ಎಂದು ಕಾಂಗ್ರೆಸ್ ಹೇಳಿದೆ.
ಸರಕಾರ ಈ ಸಾಂತ್ವನ ಕೇಂದ್ರಗಳಿಗೆ ಕಳೆದ 7ತಿಂಗಳಿಂದ ಅನುಧಾನ ಬಿಡುಗಡೆಗೊಳಿಸಿಲ್ಲ. ರಾಜ್ಯದ 196 ಕೇಂದ್ರಗಳಲ್ಲಿ ಈಗಾಗಲೇ 74 ಕೇಂದ್ರಗಳನ್ನು ಮುಚ್ಚಲಾಗಿದ್ದು ಉಳಿದವುಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿದೆ. ಪರಿಣಾಮವಾಗಿ ಇದನ್ನೆ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಸಾವಿರಕ್ಕೂ ಹೆಚ್ಚು ನೌಕರರು ಬೀದಿಗೆ ಬೀಳುವಂತಾಗಿದೆ. ಇದು ಮಹಿಳೆಯರ ಪಾಲಿನ ಮರಣ ಶಾಸನ ಎಂದು ಉಡುಪಿ ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!