Wednesday, January 26, 2022
spot_img
Homeಅಂಕಣಕಲಾ ವಿಭಾಗವೂ ನೂರಾರು ಅವಕಾಶಗಳ ಹೆಬ್ಬಾಗಿಲು

ಕಲಾ ವಿಭಾಗವೂ ನೂರಾರು ಅವಕಾಶಗಳ ಹೆಬ್ಬಾಗಿಲು

ಪಿಯುಸಿ ಹಾಗೂ ಪದವಿ ವಿಭಾಗಗಳ ಕಲಾ ತರಗತಿಗಳು ವಿದ್ಯಾರ್ಥಿಗಳಿಲ್ಲದೇ ಹೋಗಿರುವುದು ವಿಪರ್ಯಾಸ ಸಂಗತಿ. ಕಲಾ ವಿಭಾಗಕ್ಕೆ ಇತರ ವಿಭಾಗಗಳಿಗೆ ಸರಿಸಮಾನ ಆದ್ಯತೆ ಸಿಗುತ್ತಿಲ್ಲ ಎನ್ನುವುದು ಸತ್ಯ. ಪೋಷಕರಲ್ಲಿ ಹಾಗೂ ವಿಧ್ಯಾರ್ಥಿಗಳಲ್ಲಿ ಕಲಾ ವಿಭಾಗದ ಕುರಿತಾಗಿರುವ ನಿರ್ಲಕ್ಷ್ಯ ಭಾವನೆಯೇ ಇದಕ್ಕೆ ಕಾರಣ. ಸಾಕಷ್ಟು ಉದ್ಯೋಗ ಅವಕಾಶಗಳಿಲ್ಲ ಎಂಬ ತಪ್ಪು ಕಲ್ಪನೆಯೂ ಬೇರೂರಿದೆ.

ಹಿಂದೆ ಈಗಿನಷ್ಟ್ಟು ವೈವಿಧ್ಯಮಯ ಅವಕಾಶಗಳು ಇರಲಿಲ್ಲ. ಇಂದು ತಾಂತ್ರಿಕ ಪದವಿ, ಮಾಧ್ಯಮ ಕ್ಷೇತ್ರ, ನರ್ಸಿಂಗ್ ಕೋರ್ಸ್‍ ಹೀಗೆ ಕಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಹೆಜ್ಜೆ ಹೆಜ್ಜೆಗೂ ಆವಕಾಶಗಳ ಮಹಾಪೂರವೇ ಇದೆ.

ಬಿಎ ಅನಂತರ ಬಿ.ಎಡ್ ಶಿಕ್ಷಣ ಪಡೆದು ಶಿಕ್ಷಕ ವೃತ್ತಿಗೆ ಆಯ್ಕೆಯಾಗಬಹುದು. ಜೊತೆಗೆ ಸೈಕಲಾಜಿ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಸೇವೆ ಲೈಬ್ರೇರಿ ಸೈನ್ಸ್, ಟ್ರಾವಲ್ & ಟೂರಿಸಂ ಮುಂತಾದ ವಿಷಯಗಳಿದ್ದು ಇವುಗಳಲ್ಲಿ ಸ್ನಾತಕೊತ್ತರ ಪದವಿ ಪಡೆಯಬಹುದು ಅಥವಾ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಲಾವಿಭಾಗದ ವಿಧ್ಯಾರ್ಥಿಗಳಲ್ಲಿ ಕನ್ನಡ ಮಾಧ್ಯಮ ಕೀಳರಿಮೆ ಬೇಡ. ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಕನ್ನಡದಲ್ಲೆ ಬರೆಯಬಹುದು. ಕನ್ನಡದಲ್ಲೆ ಬರೆದು ಪರೀಕ್ಷೆ ಪಾಸದವರು ಸಾಕಷ್ಟು ಜನರಿದ್ದಾರೆ. ಐಎಎಸ್ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಇರುವುದರಿಂದ ಅಗತ್ಯ ಇಂಗ್ಲೀಷ್ ಜ್ಜಾನವಿದ್ದರೆ ಕನ್ನಡದಲ್ಲಿ ಪರೀಕ್ಷೆ ಬರೆದು ಯಶಸ್ಸು ಗಳಿಸಬಹುದು.

ಪತ್ರಿಕೋದ್ಯಮ, ಫೋಟೋ ಜರ್ನಲಿಸಂ, ಫ್ಯಾಶನ್ ಡಿಸೈನಿಂಗ್ ಆಹಾರ ಸಂಸ್ಕರಣ ಹೀಗೆ ವೈವಿಧ್ಯಯ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೆರಳಿಸಿವೆ. ದೃಶ್ಯ ಮಾಧ್ಯಮಗಳಲ್ಲಿ ದೊರೆಯುವ ವಿಪುಲ ಅವಕಾಶಗಳಿಂದಾಗಿ ಚಿತ್ರಕಲೆ, ಗ್ರಾಫಿಕ್ಸ್ ವೆಬ್ ಡಿಸೈನಿಂಗ್ ಮೊದಲಾದ ಕಲೆಯ ಮಾಧ್ಯಮಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಸಾಮಾಜಿಕ ಸೇವೆ ಕ್ಷೇತ್ರ
ಕಲಾ ವಿಭಾಗದ ವಿಧ್ಯಾರ್ಥಿಗಳು ಪಿಯುಸಿ ನಂತರ ಮೂರು ವರ್ಷಗಳ ಅವಧಿ ಬಿ.ಎಸ್ ಡಬ್ಲ್ಯು ಕೋರ್ಸ್ ಮಾಡಿ ನಂತರ ಎರಡು ವರ್ಷ ಅವಧಿಯ ಸ್ನಾತಕೋತ್ತರ ಮಾಡಿ ಎಂಎಸ್‍ಡಬ್ಲ್ಯೂ ಪದವಿ ಪಡೆಯಬಹುದು.
ಇದರಲ್ಲಿ ಮುಖ್ಯವಾಗಿ ಎಚ್‍ಆರ್ (ಮಾನವ ಸಂಪನ್ಮೂಲ) ಅಥವಾ ಪಿಎಮ್‍ಐಅರ್(ಪರ್ಸನಲ್ ಮ್ಯಾನೇಜ್ಮೆಂಟ್ ಇಂಡಸ್ಟ್ರಿಯಲ್ ರೀಲೇಶನ್‍ಶಿಫ್) ಹಾಗೂ ಎಮ್‍ಪಿಎಸ್‍ಡಬ್ಲ್ಯೂ( ಮೆಡಿಕಲ್ & ಸೈಕಿಯಾಟ್ಟ್ರಿಕ್ ಸೋಶಲ್ ವರ್ಕ್) ಸಿ.ಡಿ (ಸಮುದಾಯ ಅಭಿವೃದ್ದಿ) ಹೀಗೆ ಮೂರು ವಿಶೇಷ್ಯಾಧಯನ ಕ್ಷೇತ್ರಗಳನ್ನು ಒಳಗೊಂಡಿದೆ. ಇವುಗಳಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪಡೆದು ಕಂಪೆನಿಗಳಲ್ಲಿ ಸಿಬ್ಬಂದಿ ನೇಮಕಾತಿ, ಸಂಸ್ಥೆಗಳಲ್ಲಿ ಕೌನ್ಸಿಲರ್ ಆಗಿ ಎನ್‍ಜಿಒ ವಲಯಗಳಲ್ಲಿ,ಚೈಲ್ಡ್ ಲೈನ್‍ನಲ್ಲಿ ಪೂರ್ಣ ಪ್ರಮಾಣದ ಉದ್ಯೋಗಳಲ್ಲಿ ತೊಡಗಬಹುದು.

ನರ್ಸಿಂಗ್ ಸೇವೆ
ಆಸಕ್ತ ಕಲಾ ವಿಭಾಗದ ವಿದ್ಯಾರ್ಥಿಗಳು ಮೂರು ವರ್ಷ ಅವಧಿಯ ಜಿಎನ್ಎಮ್ (ಜನರಲ್ ನರ್ಸಿಂಗ್ & ಮಿಡ್‍ವೈಫ್) ನರ್ಸಿಂಗ್ ಕೋರ್ಸ್ ಮಾಡಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಸೇವೆಯಲ್ಲಿ ತೊಡಗಿಕೊಳ್ಳಬಹುದು. ಇದೇ ಕೋರ್ಸ್‍ನ್ನು ಆಧಾರವಾಗಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯಬಹುದು.

ಡಿಪ್ಲೋಮ/ಐಟಿಐ ಕೋರ್ಸ್‍ಗಳು
ಪದವಿ ಕೋರ್ಸ್‍ಗೆ ಸೇರುವುದು ಇಷ್ಟವಿಲ್ಲವಾದರೆ ಪಿಯುಸಿ ನಂತರ ಕಲಾ ವಿಭಾಗದ ವಿದ್ಯಾರ್ಥಿಗಳು 3 ವರ್ಷ ಅವಧಿಯ ಡಿಪ್ಲೋಮ ಕೋರ್ಸ್‍ಗಳನ್ನು ಮಾಡಬಹುದು. ಸರಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶವು ಮೇರಿಟ್ ಅನುಸರಿಸಿ ಮೀಸಲಾತಿ ಅನುಗುಣವಾಗಿ ನೀಡುತ್ತಾರೆ.

ಐಟಿಐ ಕೋರ್ಸ್‍ಗಳು:
ಎರಡು ವರ್ಷಗಳ ಅವಧಿಯ ಐಟಿಐಗಳಲ್ಲಿ ನಾನಾ ತಾಂತ್ರಿಕ ಕೋರ್ಸ್‍ಗಳು ಲಭ್ಯವಿದೆ. ಎಸ್ಸೆಸ್ಸೆಲ್ಸಿಯಲ್ಲಿ ಅನುರ್ತೀಣರಾದರೂ ಪ್ರವೇಶ ಪಡೆಯಬಹುದು. ಈ ಕೋರ್ಸ್‍ಗಳಲ್ಲಿ ಪಾಸಾದವರು ಅಖಿಲ ಭಾರತ ಮಟ್ಟದ ಎನ್‍ಸಿವಿಟಿ ಸರ್ಟಿಪಿಕೇಟ್ ದೊರೆಯುತ್ತದೆ. ಇತರ ತಾಂತ್ರಿಕ ಕೋರ್ಸ್‍ಗಳಾದ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ರೇಫ್ರೀಜರೇಟರ್, ಏರ್‍ ಕಂಡಿಸನಿಂಗ್, ಡೀಸಲ್ ಮೆಕ್ಯಾನಿಕ್, ಅಟೋ ಇಲೆಕ್ಟ್ರಿಷಿಯನ್ ಇತ್ಯಾದಿ ಕೋರ್ಸ್‍ಗಳನ್ನು ಅನುದಾನಿತ ಅಥವಾ ಸರಕಾರಿ ಐಟಿಐ ಕೇಂದ್ರಗಳಲ್ಲಿ ಬಹಳ ಕಡಿಮೆ ವೆಚ್ಚದಲ್ಲಿ ಪಡೆಯಬಹದು.
ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಮನಸ್ಸು ಮಾಡಿದರೆ ನಮಗೆ ಹಲವಾರು ವಿಫುಲ ಅವಕಾಶಗಳು ದೊರೆಯುತ್ತದೆ ಆದರೆ ಅದರ ದಾರಿ ನಾವೇ ಕಂಡುಕೊಳ್ಳಬೇಕು. ಕಲಾ ವಿಭಾಗಗಳ ಕಡೆಗಿನ ನಿರ್ಲಕ್ಷ್ಯ ಭಾವನೆಯನ್ನು ಬದಲಾಯಿಸುವಲ್ಲಿ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಇಲಾಖೆ ಕಾರ್ಯೋನ್ಮೂಖವಾಗಬೇಕಾಗಿದೆ. ಮುಖ್ಯವಾಗಿ ಸರಕಾರ ಕಲಾವಿಭಾಗಕ್ಕೆ ಹೆಚ್ಚು ಮೌಲ್ಯ ಪ್ರಾಪ್ತವಾಗುವಂತೆ ಪಠ್ಯ ಕ್ರಮಗಳನ್ನು ಅಳವಡಿಸಬೇಕು.

ವಿಶಾಂತ್ ಶೆಟ್ಟಿ ಪೊಸ್ರಾಲು
ಉಪನ್ಯಾಸಕರು

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!