Thursday, December 2, 2021
spot_img
Homeಸ್ಥಳೀಯ ಸುದ್ದಿನರೇಂದ್ರ ಕಾಮತ್‌ ಅವರಿಗೆ ಕಾಬೆಟ್ಟು ಶಾಲೆಯಲ್ಲಿ ಸನ್ಮಾನ

ನರೇಂದ್ರ ಕಾಮತ್‌ ಅವರಿಗೆ ಕಾಬೆಟ್ಟು ಶಾಲೆಯಲ್ಲಿ ಸನ್ಮಾನ

ಕಾರ್ಕಳ : ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಕಾಬೆಟ್ಟು ಸರಕಾರಿ ಶಾಲೆ ದೈಹಿಕ ಶಿಕ್ಷಣ ಹಾಗೂ ಯೋಗ ಶಿಕ್ಷಕ ನರೇಂದ್ರ ಕಾಮತ್ ಅವರಿಗೆ ಕಾಬೆಟ್ಟು ಶಾಲಾ ಶತಮಾನೋತ್ಸವ ಸಮಿತಿ ವತಿಯಿಂದ ಶಾಲೆಯ ಅಸೆಂಬ್ಲಿ ಸಭಾಂಗಣದಲ್ಲಿ ಸೆ. 6ರಂದು ಸನ್ಮಾನಿಸಲಾಯಿತು. ಶತಮಾನೋತ್ಸವ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ರೋಟರಿಯ ಮೋಹನ್ ಶೆಣೈ ಅಭಿನಂದಿಸಿದರು. ನಿವೇದಿತಾ ಕಾಮತ್, ಸುನೀತಾ ನಾಯಕ್ ಅಭಿನಂದನಾ ಭಾಷಣ ಮಾಡಿದರು. ಪುರಸಭಾ ಸದಸ್ಯೆ ರೆಹಮತ್ ಎನ್. ಶೇಕ್, ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಆರೀಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡೇಸಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಉಭಯ ಶಾಲೆಗಳ ಶಿಕ್ಷಕರು, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರ್. ವೈಕುಂಠ ಶೆಣೈ ಸ್ವಾಗತಿಸಿ, ಪ್ರೇಮಾನಂದ ಪೈ ವಂದಿಸಿದರು. ರಾಜೇಂದ್ರ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!