Homeಸ್ಥಳೀಯ ಸುದ್ದಿಕಾರ್ಕಳ ನಿಲ್ಲದ ಗೋಕಳ್ಳತನ : ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ಎಚ್ಚರಿಕೆ

Related Posts

ಕಾರ್ಕಳ ನಿಲ್ಲದ ಗೋಕಳ್ಳತನ : ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ಎಚ್ಚರಿಕೆ

ಕಾರ್ಕಳ : ಅಜೆಕಾರು, ಶಿರ್ಲಾಲು, ಅಂಡಾರು, ಕೆರ್ವಾಶೆ ಭಾಗದಲ್ಲಿ ಕೃಷಿಕರ ಹಟ್ಟಿಯಿಂದಲೇ ಗೋ ಕಳ್ಳತನವಾಗುತಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ. ಶಿರ್ಲಾಲು ಒಂದೇ ಗ್ರಾಮದಲ್ಲಿ ಸುಮಾರು 25 ದನ ಕಳ್ಳತನವಾಗಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಕಳ ತಾಲೂಕಿನಾದ್ಯಂತ ಅವ್ಯಾಹತವಾಗಿ ಗೋ ಕಳ್ಳತನವಾಗುತ್ತಿದ್ದು, ಗೋಕಳ್ಳರ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಗೋ ಕಳ್ಳರನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಆಗ್ರಹಿಸಿ ಮತ್ತು ಗೋ ಕಳಕೊಂಡವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ನಾರಾವಿ ನ್ಯೂಸ್‌ ಕಾರ್ಕಳಕ್ಕೆ ತಿಳಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಸದಸ್ಯರು ಸೆ. 6ರಂದು ಗೋ ಕಳಕೊಂಡವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.

LEAVE A REPLY

Please enter your comment!
Please enter your name here

Latest Posts

error: Content is protected !!