Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬಿಳಿ ಬೆಂಡೆ ಮೇಳ

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬಿಳಿ ಬೆಂಡೆ ಮೇಳ

ರಾಜ್ಯದಾದ್ಯಂತ ಬಿಳಿ ಬೆಂಡೆ ವಿಸ್ತರಿಸುವ ನಿಟ್ಟಿನಲ್ಲಿ ಅಧಿವೇಶನ ಸಂದರ್ಭ ಶಾಸಕರಿಗೆ ಬೆಂಡೆ ಖಾದ್ಯ- ಸುನಿಲ್ ಕುಮಾರ್‌

ಕಾರ್ಕಳ : ಕಾರ್ಕಳದ ಬಿಳಿ ಬೆಂಡೆಗೆ ರಾಜ್ಯದಾದ್ಯಂತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಅಧಿವೇಶನ ಸಂದರ್ಭ ಶಾಸಕರಿಗೆ ಊಟದ ವೇಳೆ ಬಿಳಿ ಬೆಂಡೆ ಖಾದ್ಯ ನೀಡಲಾಗುವುದು. ಇದರೊಂದಿಗೆ ಬಿಳಿ ಬೆಂಡೆಗೆ ಅಧಿಕೃತ ಬ್ರಾಂಡ್‌ ಲಭಿಸುವಂತೆ ಮಾಡುವಲ್ಲಿ ಪ್ರಯತ್ನಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ಸೆ. 6ರಂದು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಡೆದ ಬಿಳಿಬೆಂಡೆ ಮೇಳದಲ್ಲಿ ಮಾತನಾಡಿದರು.

ಆಹಾರದೊಂದಿಗೆ ಔಷಧೀಯ ಗುಣ ಹೊಂದಿರುವ ಬಿಳಿ ಬೆಂಡೆಗೆ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಕೃಷಿ ಯುನಿವರ್ಸಿಟಿ ಮೂಲಕ ಪ್ರಯತ್ನಿಸಲಾಗುತ್ತಿದೆ. ಅಧಿಕೃತ ಮಾನ್ಯತೆ ಲಭಿಸಿದರೆ ರೈತರಿಗೆ ಸಬ್ಸಿಡಿ, ಬೆಂಬಲ ದೊರೆಯುವ ಸಾಧ್ಯತೆಯಿದೆ. ಕಾರ್ಕಳದಲ್ಲಿ ಸುಮಾರು 20 ಸಾವಿರ ಕುಟುಂಬಗಳು ಬಿಳೆ ಬೆಂಡೆ ಬೆಳೆಸುವ ಮೂಲಕ ಬೆಂಡೆ ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ರೈತರೇ ಸೂಚಿಸಿದ ಉತ್ಪನ್ನ
ರೈತರೇ ಸೂಚಿಸಿರುವ ಕಾರ್ಲ ಕಜೆ, ಬಿಳಿ ಬೆಂಡೆಯನ್ನು ಬ್ರಾಂಡ್‌ ಮಾಡಲಾಗುತ್ತಿದೆ. ಕಾರ್ಕಳ ಜನತೆ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಇವೆರೆಡು ಬೆಳೆ ವ್ಯಾಪಕ ಪ್ರಸಿದ್ಧಿಗೆ ಬರುವಂತಾಗಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾರ್ಕಳದ ಆಯ್ದ ರೈತರು ಈ ಬಾರಿ ಬಿಳಿ ಬೆಂಡೆ ಬೀಜ ನೀಡಿರುತ್ತಾರೆ. ಮುಂದಿನ ಬಾರಿ ರೈತರು ತಾವಾಗಿಯೇ ಬಿಳಿ ಬೆಂಡೆ ಬೀಜ ಸಂಗ್ರಹಿಸುವಂತೆ ಸಚಿವರು ವಿನಂತಿಸಿದ ಸಚಿವರು ಬಿಜೆಪಿ ಮಹಿಳಾ ಮೋರ್ಚಾ ಬಿಳಿ ಬೆಂಡೆ ಮೇಳ ಆಯೋಜಿಸುವ ಮೂಲಕ ಬೆಂಡೆಯಿಂದ ಹತ್ತಾರು ಬಗೆಯ ಖಾದ್ಯ ಮಾಡಬಹುದೆಂಬುದನ್ನು ನಿರೂಪಿಸಿರುತ್ತಾರೆ ಎಂದರು.

ಪ್ರದರ್ಶನ

ಬೆಂಡೆ ಮೇಳ ಪ್ರದರ್ಶನದಲ್ಲಿ 75 ಕ್ಕೂ ಹೆಚ್ಚು ಖಾದ್ಯಗಳು, 250ಕ್ಕೂ ಹೆಚ್ಚಿನ ಮನೆಗಳಿಂದ ಬೆಂಡೆ ತರಲಾಗಿತ್ತು. ಬೆಂಡೆ ಪ್ರದರ್ಶನದಲ್ಲಿ ಮುಡಾರು ಬಿಜೆಪಿ ಮಹಾ ಶಕ್ತಿ ಕೇಂದ್ರ ಪ್ರಥಮ, ನಿಟ್ಟೆ ಮತ್ತು ಮರ್ಣೆ ಮಹಾಶಕ್ತಿ ಕೇಂದ್ರ ದ್ವಿತೀಯ, ಮುಂಡ್ಕೂರು ಹಾಗೂ ಕಾರ್ಕಳ ನಗರ ಶಕ್ತಿ ಕೇಂದ್ರ ತೃತೀಯ ಸ್ಥಾನ ಪಡೆಯಿತು.
ಖಾದ್ಯದಲ್ಲಿ ಹೆಬ್ರಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಸುಗಂಧಿ ಪ್ರಥಮ, ನಗರ ಶಕ್ತಿ ಕೇಂದ್ರದ ಕವಿತಾ ಹರೀಶ್‌, ಕುಕ್ಕುಂದೂರು ಶಕ್ತಿ ಕೇಂದ್ರದ ಸುಚಿತ್ರಾ ಶೆಟ್ಟಿ ದ್ವೀತಿಯ, ನಿಟ್ಟೆ ಶಕ್ತಿ ಕೇಂದ್ರದ ಯಶೋದಾ ಹಾಗೂ ಮರ್ಣೆ ಶಕ್ತಿ ಕೇಂದ್ರದ ಸುಮಂಗಳಾ ನಾಯಕ್‌ ತೃತೀಯಾ, ಮುಡಾರು ಶಕ್ತಿ ಕೇಂದ್ರದ ಗಾಯತ್ರಿ ಪ್ರಭು, ಮುಂಡ್ಕೂರು ಶಕ್ತಿ ಕೇಂದ್ರದ ಅರುಣಾ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದರು. ಜ್ಯೋತಿ ರಮೇಶ್‌ ಬಹುಮಾನಿತ ಪಟ್ಟಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರಾದ ಎಮ್.‌ ಕೆ. ವಿಜಯ್‌ ಕುಮಾರ್‌, ಗೇರುನಿಗಮದ ಅಧ್ಯಕ್ಷರಾದ ಮಣಿರಾಜ್‌ ಶೆಟ್ಟಿ, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಮಹಾವೀರ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚದ ಅಧ್ಯಕ್ಷರು ವೀಣಾ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗೀತಾಂಜಲಿ ಸುವರ್ಣ, ಕಾರ್ಕಳ ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಾಲಿನಿ ಜೆ. ಶೆಟ್ಟಿ, ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್‌, ಎಪಿಎಂಸಿ ಅಧ್ಯಕ್ಷರಾದ ರತ್ನಾಕರ್‌ ಅಮೀನ್‌, ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ವಿಕ್ಯಾತ್‌ ಶೆಟ್ಟಿ , ಪಕ್ಷದ ಹಿರಿಯ ಪ್ರಮುಖರು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿನಯ ಡಿ. ಬಂಗೇರಾ ಸ್ವಾಗತಿಸಿ, ಮಾಲಿನಿ ಜೆ. ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಮಲ್ಲಿಕಾ ರಾವ್‌ ಕಾರ್ಯಕ್ರಮ ನಿರೂಪಿಸಿ, ಮಾನಸ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!