Sunday, September 26, 2021
spot_img
Homeಸ್ಥಳೀಯ ಸುದ್ದಿಸೆ. 6 : ಬಿಳಿ ಬೆಂಡೆ ಮೇಳ

ಸೆ. 6 : ಬಿಳಿ ಬೆಂಡೆ ಮೇಳ

ಬೆಂಡೆ ಹಾಗೂ ಬೆಂಡೆ ಖಾದ್ಯ ಪ್ರದರ್ಶನ

ಕಾರ್ಕಳ : ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕಾರ್ಕಳ ಇದರ ವತಿಯಿಂದ ಕಾರ್ಲ ಬ್ರಾಂಡ್‌ ಆಗಿರುವ ಬಿಳಿ ಬೆಂಡೆ ಮೇಳ ಸೆ. 6ರಂದು ವಿಕಾಸ ಜನ ಸೇವಾ ಕಚೇರಿಯಲ್ಲಿ ನಡೆಯಲಿದೆ.

ಹೇರಳ ವಿಟಮಿನ್, ಖನಿಜ ಮತ್ತು ಪೋಷಕಾಂಶಗಳ ಆಗರವಾಗಿರುವ ಬಿಳಿಬೆಂಡೆಗೆ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ, ಬೆಳೆಯಲು ಪ್ರೋತ್ಸಾಹ ನೀಡುವ ಸಲುವಾಗಿ ನಮ್ಮ ಉತ್ಪನ್ನ- ನಮ್ಮ ಹೆಮ್ಮೆ ಸ್ಲೊಗನ್‌ನೊಂದಿಗೆ ಬಿಳಿ ಬೆಂಡೆ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರು ಬಿಳಿ ಬೆಂಡೆ ಪ್ರದರ್ಶಿಸಲು ಹಾಗೂ ಮಹಿಳಾ ಮೋರ್ಚಾ ಸದಸ್ಯರು ಖಾದ್ಯಗಳ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸೆ. 5ರ ಒಳಗಾಗಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಯ ಬಂಗೇರಾ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!