ನರೇಂದ್ರ ಕಾಮತ್, ಮಂಜುನಾಥ ಶೆಟ್ಟಿ, ಆನಂದ ಸಾಲಿಗ್ರಾಮ
ಕಾರ್ಕಳ : ಶಿಕ್ಷಕರ ದಿನಾಚರಣೆಯಂಗವಾಗಿ ನೀಡಲಾಗುವ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಕಾರ್ಕಳದ ಶೈಕ್ಷಣಿಕ ವಲಯದಿಂದ ಮೂವರು ಆಯ್ಕೆಯಾಗಿದ್ದಾರೆ. ಕಾಬೆಟ್ಟು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನರೇಂದ್ರ ಕಾಮತ್, ಕುಚ್ಚೂರು ಶಾಲೆ ಸಹಶಿಕ್ಷಕ ಮಂಜುನಾಥ ಶೆಟ್ಟಿ, ಮುದ್ರಾಡಿ ಪ್ರೌಢಶಾಲೆ ಶಿಕ್ಷಕ ಪಿ.ವಿ. ಆನಂದ ಸಾಲಿಗ್ರಾಮ ಅವರು ಆಯ್ಕೆಯಾಗಿರುತ್ತಾರೆ. ಒಟ್ಟು 17 ಮಂದಿ ಶಿಕ್ಷಕರು ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ಸೆ. 5ರಂದು ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ ಸರಳವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಚಿವ ವಿ. ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿ.ಪಂ. ಸಿಇಒ ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ ಭಾಗವಹಿಸಲಿದ್ದಾರೆ.