Saturday, January 22, 2022
spot_img
Homeರಾಜ್ಯಉಡುಪಿ ಜಿಲ್ಲೆ- ವೀಕೆಂಡ್ ಕರ್ಫ್ಯೂ ಅಗತ್ಯವೇ ?

ಉಡುಪಿ ಜಿಲ್ಲೆ- ವೀಕೆಂಡ್ ಕರ್ಫ್ಯೂ ಅಗತ್ಯವೇ ?

ಭಾರತದಲ್ಲಿ ಕೋರೋನ ನಿಯಂತ್ರಣಕ್ಕೆ ಬರುವ ಲಕ್ಷಣ ತಕ್ಕ ಮಟ್ಟಿಗೆ ಗೋಚರಿಸುತ್ತಿದ್ದರೂ ಕೇರಳ ರಾಜ್ಯದಲ್ಲಿ ಮಾತ್ರ ಪರಿಸ್ಥಿತಿ ಕೈತಪ್ಪಿ ಹೋಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ರಾಜ್ಯಗಳು ಅದರ ಪರಿಣಾಮ ಎದುರಿಸುತ್ತಿದೆ. ಪಾಸಿಟಿವಿಟಿ ರೇಟ್ 2 ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಸರಕಾರ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದೆ. ಇದು ಒಂದು ರೀತಿಯಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ರಿಕ್ಷಾದವರಿಗೆ, ಟೆಂಪೋ ಚಾಲಕರಿಗೆ, ಸಾರಿಗೆ ಉದ್ಯಮಕ್ಕೆ ಬಲವಂತದ ಬಂದ್ ಎಂದು ಅರ್ಥ ಮಾಡಿಕೊಳ್ಳಲಾಗುತ್ತದೆ. ಮೊದಲೇ ಆರ್ಥಿಕ ನಷ್ಟದಲ್ಲಿ ಇರುವ ಈ ಉದ್ಯಮಗಳು ಈಗಲೂ ಚೇತರಿಸಿಕೊಂಡಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಬ್ಯಾಂಕ್ ಸಾಲ ಮಾಡಿದವರು, ಕೈ ಸಾಲ ಮಾಡಿ ವ್ಯಾಪಾರ ಮಾಡುವವರು, ಬೀದಿ ಬದಿಯ ವ್ಯಾಪಾರದವರು ತುಂಬಾ ಕಷ್ಟದಲ್ಲಿ ದಿನ ದೂಡುವಂತಾಗಿದೆ.

ಉಡುಪಿ ಜಿಲ್ಲೆಯ ಪಾಸಿಟೀವಿಟಿ ದರ ಎರಡಕ್ಕಿಂತ ಕಡಿಮೆ ಇದೆ. ವ್ಯಾಕ್ಸಿನೇಷನ್ ಸಂಖ್ಯೆಯಲ್ಲಿ ಕೂಡ ಉಡುಪಿ ಮುಂಚೂಣಿಯಲ್ಲಿದೆ. ರಾಜ್ಯಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ನಿಯಂತ್ರಣದಲ್ಲಿದೆ. ಶಾಲಾ ಕಾಲೇಜು ಆರಂಭ ಆದರೂ ಸೋಂಕು ಇದುವರೆಗೂ ವ್ಯಾಪಕವಾಗಿ ಹರಡಿಲ್ಲ. ಅದಕ್ಕೆ ಕಾರಣ ಜಿಲ್ಲಾಡಳಿತ ಕೈಗೊಂಡ ಬಿಗಿ ಕ್ರಮ ಮತ್ತು ಜನರು ತಮ್ಮ ಮೇಲೆ ಹೇರಿಕೊಂಡ ಸ್ವ ನಿಯಂತ್ರಣ. ಇಲ್ಲಿ ನಿಯಮವನ್ನು ಮುರಿದು ಬೀದಿಗೆ ಇಳಿಯುವವರು ಕಡಿಮೆ. ರಾಜಕೀಯ ಸಭೆ ಹೊರತುಪಡಿಸಿದರೆ ದೊಡ್ಡ ಜನ ಸೇರಿಸುವ ಕಾರ್ಯಕ್ರಮ ನಡೆದಿಲ್ಲ. ದೇವಸ್ಥಾನಗಳ ಉತ್ಸವ, ಜಾತ್ರೆ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಹಾಗಿರುವಾಗ ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಅಗತ್ಯವೇ ಇರಲಿಲ್ಲ.

ಕೊರೊನ ನಿಯಂತ್ರಣ ಹೊಣೆ ಸ್ಥಳೀಯಾಡಳಿತ ಸಂಸ್ಥೆಗೆ ನೀಡಿದರೆ ಒಳ್ಳೆಯದು
ದೇಶದ ಪರಿಸ್ಥಿತಿ ಎಲ್ಲ ಕಡೆ ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ತಾಲೂಕಿನಲ್ಲಿ ಪರಿಸ್ಥಿತಿ ಭಿನ್ನವಾಗಿಯೇ ಇದೆ. ಉಡುಪಿ ಮಣಿಪಾಲಕ್ಕೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಅಧಿಕ. ಹಾಗಾಗಿ ಉಡುಪಿಯಲ್ಲಿ ಕೊರೊನಾ ತಡೆಗಟ್ಟುವಲ್ಲಿ ತೊಡಕಾಗಿ ಪರಿಣಮಿಸಿದೆ.
ಯಾವ ಗ್ರಾಮ, ಪುರಸಭೆಯ ವ್ಯಾಪ್ತಿಯಲ್ಲಿ ಪಾಸಿಟಿವಿಟಿ ರೇಟ್ ಎರಡಕ್ಕಿಂತ ಹೆಚ್ಚು ಇದೆ ಅಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಅದನ್ನು ಆದ್ಯತೆಯಾಗಿ ತೆಗೆದುಕೊಂಡು ನಿಯಂತ್ರಕ ಕ್ರಮ ಅಳವಡಿಸಿಕೊಂಡರೆ ಉತ್ತಮ. ತಾಲೂಕು ಆಸ್ಪತ್ರೆಗಳಲ್ಲಿ ಆಕ್ಷೀಜನ್ ಬೆಡ್ ಮತ್ತು ವೆಂಟಿಲೇಟರ್ ಕೊರತೆ ಸದ್ಯಕ್ಕೆ ಇಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮತ್ತು ಪುರಸಭೆಯ ಮಟ್ಟದಲ್ಲಿ ಅಧಿಕಾರಿಗಳು ಸಕ್ಷಮವಾಗಿ ಕೆಲಸ ಮಾಡಿದರೆ ಸಾಕು. ಯಾವುದೇ ಲಾಕ್ ಡೌನ್, ಕರ್ಫ್ಯೂ ಅಗತ್ಯವಿಲ್ಲ. ಜಿಲ್ಲೆಗಳ ಗಡಿಯನ್ನು ಬಂದ್ ಮಾಡಿದರೆ ಸಾಕು. ಜನರು ಹೆಚ್ಚು ಪ್ರಬುದ್ಧರಾಗಿ ತಮ್ಮ ಮೇಲೆ ನಿಯಂತ್ರಣ ಹೇರಿದರೆ ಸಾಕು. ಜನರು ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ನಿರ್ಬಂಧ ಮಾಡಿದರೆ ಸಾಕಾಗುವುದು. ಮತ್ತೆ ಕರ್ಫ್ಯೂ ಹೇರಿಕೆ ಮಾಡಿ ವ್ಯಾಪಾರಿಗಳನ್ನು ಬೀದಿಗೆ ತರುವ ಅಗತ್ಯ ಇಲ್ಲ ಎನುವುದು ನ್ಯೂಸ್ ಕಾರ್ಕಳದ ಅಭಿಮತ.

ಸೆ. 2ವರೆಗಿನ ಉಡುಪಿ ಜಿಲ್ಲಾ ಕೊರೊನಾ ವರದಿ

986543 ಮಂದಿ ಕೊರೊನಾ ಪರೀಕ್ಷೆ ಮಾಡಿರುತ್ತಾರೆ. 72231 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುತ್ತಾರೆ. ಮೊದಲ ಅಲೆಯಲ್ಲಿ 190 ದ್ವಿತೀಯ ಅಲೆಯಲ್ಲಿ 266 ಮಂದಿ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಕಾರಣಕ್ಕಾಗಿ ಸಾವಿಗೀಡಾಗಿದ್ದಾರೆ. 1408 ಸಕ್ರಿಯ ಪ್ರಕರಣವಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!