Wednesday, January 19, 2022
spot_img
Homeಸ್ಥಳೀಯ ಸುದ್ದಿಎಲ್ಐಸಿ ವತಿಯಿಂದ ವಿಜೇತ ವಿಶೇಷ ಶಾಲೆಗೆ ಬಸ್‌ ಕೊಡುಗೆ

ಎಲ್ಐಸಿ ವತಿಯಿಂದ ವಿಜೇತ ವಿಶೇಷ ಶಾಲೆಗೆ ಬಸ್‌ ಕೊಡುಗೆ

ಕಾರ್ಕಳ : ಎಲ್ಐಸಿ ಆಫ್ ಇಂಡಿಯಾ – ಗೋಲ್ಡನ್ ಜುಬಿಲಿ ಫೌಂಡೇಶನ್ ವತಿಯಿಂದ‌ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಗೆ ಶಾಲಾ ಬಸ್‌ ಅನ್ನು ಕೊಡುಗೆಯಾಗಿ ನೀಡಲಾಯಿತು. 38 ಸೀಟ್ ಹೊಂದಿರುವ ಶಾಲಾ ಬಸನ್ನು ಸೆ. 3ರಂದು ಸೀನಿಯರ್ ಡಿವಿಜನಲ್ ಮ್ಯಾನೇಜರ್ ಬಿಂದು ರೋಬರ್ಟ್ ಅವರು ಸಂಸ್ಥೆ ಸಂಚಾಲಕಿ ಡಾ. ಕಾಂತಿ ಹರೀಶ್‌ ಅವರಿಗೆ ಹಸ್ತಾಂತರಿಸಿದರು.
ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ಎಲ್‌ಐಸಿ ಮಾರ್ಕೆಟಿಂಗ್ ಮ್ಯಾನೇಜರ್ ರಮೇಶ್‌ ಭಟ್‌, ಚೀಫ್ ಮ್ಯಾನೇಜರ್ ಮೊಯ್ದಿನ್‌, ಸೇಲ್ಸ್‌ ಮ್ಯಾನೇಜರ್‌ ಕೆ. ಸದಾಶಿವ, ಪ್ರಬಂಧಕರಾದ ಎ. ಮೋಹನ್ ದಾಸ್, ‌ ಯಜ್ಞೆಶ್ ಸಿ.ಎಚ್., ಶಾಲಾ ಕಾರ್ಯದರ್ಶಿ ಹರೀಶ್, ಕೋಶಾಧಿಕಾರಿ ಸಿಯಾ ಸಂತೋಷ್ ನಾಯಕ್, ಟ್ರಸ್ಟಿ ಕಿರಣ್ ಶೆಟ್ಟಿ, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ, ಜನಪ್ರಿಯ ರೈಸ್ ಮಿಲ್ ಮಾಲಕ ಮಂಜುನಾಥ ಪೂಜಾರಿ, ಕ.ರಾ.ವಿಶೇಷ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಸಾಮಾಜಿಕ ಮುಂದಾಳು ರತ್ನಾಕರ್ ಶೆಟ್ಟಿ ಎಣ್ಣೆಹೊಳೆ, ಹೆತ್ತವರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ , ಶಿಕ್ಷಕಿ ಕು. ಶ್ರುತಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!