Saturday, October 16, 2021
spot_img
Homeರಾಜ್ಯವಾಹನ ಮಾಲೀಕರು ಸ್ಥಳದಲ್ಲಿಯೇ ಇದ್ದರೆ ಟೋಯಿಂಗ್ ಮಾಡುವಂತಿಲ್ಲ: ಆರಗ ಜ್ಞಾನೇಂದ್ರ

ವಾಹನ ಮಾಲೀಕರು ಸ್ಥಳದಲ್ಲಿಯೇ ಇದ್ದರೆ ಟೋಯಿಂಗ್ ಮಾಡುವಂತಿಲ್ಲ: ಆರಗ ಜ್ಞಾನೇಂದ್ರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪದೇ ಪದೇ ವಿವಾದಕ್ಕೆ ಒಳಗಾಗುತ್ತಿರುವ ಸಂಚಾರ ಪೊಲೀಸರ ಟೋಯಿಂಗ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ವಾಹನ ಟೋಯಿಂಗ್ ಮಾಡುವಾಗ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನಗಳ ಟೋಯಿಂಗ್ ಮಾಡುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡದೆ ಟೋಯಿಂಗ್ ಮಾಡಲಾಗುತ್ತಿದೆ. ಮಾಲೀಕರು ಅಲ್ಲಿಯೇ ಇದ್ದರೂ, ಮನವಿ ಮಾಡಿದರೂ ವಾಹನವನ್ನು ಬಿಡುತ್ತಿಲ್ಲ. ಅಲ್ಲದೆ, ವಾಹನವನ್ನು ಟೋಯಿಂಗ್ ಮಾಡುವಾಗ ಅದಕ್ಕೆ ಹಾನಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಲ್ಲದೆ, ವಾಹನ ಮಾಲೀಕರು ಹಾಗೂ ಟೋಯಿಂಗ್ ಸಿಬ್ಬಂದಿ ನಡುವೆ ವಾಗ್ವಾದ, ಸಂಘರ್ಷ ನಡೆದ ಅನೇಕ ಘಟನೆಗಳು ವರದಿಯಾಗಿವೆ.
ಇನ್ನು ಮುಂದೆ ಟ್ರಾಫಿಕ್ ಪೊಲೀಸರು ವಾಹನ ಟೋಯಿಂಗ್ ಮಾಡುವ ಸಂದರ್ಭದಲ್ಲಿ ವಾಹನ ಮಾಲೀಕರು ಸ್ಥಳದಲ್ಲಿದ್ದರೆ ಅವರಿಂದ ನೋ ಪಾರ್ಕಿಂಗ್ ಶುಲ್ಕವನ್ನು ಮಾತ್ರ ವಸೂಲಿ ಮಾಡಬೇಕು ಹಾಗೂ ವಾಹನವನ್ನು ಅವರಿಗೆ ಅಲ್ಲಿಯೇ ಹಿಂದಿರುಗಿಸಬೇಕು ಎಂದು ಗೃಹ ಸಚಿವರು ಸೂಚನೆ ನೀಡಿದ್ದಾರೆ.
ಟೋಯಿಂಗ್ ಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಎಚ್ಚರಿಗೆ ವಹಿಸಬೇಕು. ಟೋಯಿಂಗ್ ಸಿಬ್ಬಂದಿ ಸಾರ್ವಜನಿಕರ ಜತೆ ಸೌಜನ್ಯ ವರ್ತಿಸಬೇಕು. ವಾಹನಕ್ಕೆ ಹಾನಿ ಮಾಡಬಾರದು. ಜಗಾರೂಕತೆಯಿಂದ ಟೋಯಿಂಗ್ ಮಾಡಬೇಕು ಎಂದು ಅವರು ತಾಕೀತು ಮಾಡಿದ್ದಾರೆ.
ಟೋಯಿಂಗ್ ಮಾಡುವ ಮುನ್ನ ಅವರು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವುದನ್ನು ವಾಹನ ಮಾಲೀಕರ ಗಮನಕ್ಕೆ ತರಬೇಕು. ವಾಹನ ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಹೆಚ್ಚುವರಿ ಆಯುಕ್ತ (ಸಂಚಾರ) ರವಿಕಾಂತೇಗೌಡ ಅವರೊಂದಿಗೆ ನಡೆದ ಸಭೆಯಲ್ಲಿ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!