Thursday, December 2, 2021
spot_img
Homeಸ್ಥಳೀಯ ಸುದ್ದಿಪತಿಯ ನಿಧನದಿಂದ ನೊಂದ ಪತ್ನಿ ಆತ್ಮಹತ್ಯೆ !

ಪತಿಯ ನಿಧನದಿಂದ ನೊಂದ ಪತ್ನಿ ಆತ್ಮಹತ್ಯೆ !

ಆಕಸ್ಮಿಕವಾಗಿ ಇಲಿ ಪಾಷಾಣ ತಿಂದೆ ಎಂದು ಹೇಳಿಕೆ ನೀಡಿದ್ದ ಮಹಿಳೆ

ಕಾರ್ಕಳ : ಪತಿಯ ಸಾವಿನಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಕಾಬೆಟ್ಟುವಿನಿಂದ ವರದಿಯಾಗಿದೆ. ಆ. 19ರಂದು ಪತಿ ಗಣಪತಿ ಆಚಾರ್ಯ ಮೃತಪಟ್ಟಿದ್ದು, ಅವರ ಪತ್ನಿ ಕಲಾವತಿ (61) ಆ. 20ರಂದು ಇಲಿ ಪಾಷಾಣ ಸೇವಿಸಿ ಅಸ್ವಸ್ತಗೊಂಡಿದ್ದರು. ಕೂಡಲೇ ಅವರನ್ನು ಕಾರ್ಕಳ ಸಿಟಿ ನರ್ಸಿಂಗ್‌ ಹೋಂ ಕರೆದುಕೊಂಡು ಹೋಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ. 26ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸೆ. 1ರಂದು ಕಲಾವತಿಯವರು ಕೊನೆಯುಸಿರೆಳೆದರು. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲಿ ಪಾಷಾಣ ಹೇಳಿಕೆ
ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ ಕಲಾವತಿಯವರು ಆಕಸ್ಮಿಕವಾಗಿ ಮನೆಯಲ್ಲಿ ಇಲಿ ಪಾಷಾಣವನ್ನು ಪೇಸ್ಟ್ ಎಂದು ತಿಳಿದು ಹಲ್ಲು ಉಜ್ಜಿದ್ದಾಗಿ ಹೇಳಿರುತ್ತಾರೆ. ಆದರೆ, ಇದು ಆತ್ಮಹತ್ಯೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!