Friday, September 24, 2021
spot_img
Homeಸ್ಥಳೀಯ ಸುದ್ದಿಬಿಜೆಪಿ ಸರಕಾರದಲ್ಲಿ ಬಡವರನ್ನು ಕೇಳುವವರೇ ಇಲ್ಲ-ಮಂಜುನಾಥ ಪೂಜಾರಿ

ಬಿಜೆಪಿ ಸರಕಾರದಲ್ಲಿ ಬಡವರನ್ನು ಕೇಳುವವರೇ ಇಲ್ಲ-ಮಂಜುನಾಥ ಪೂಜಾರಿ

ಹೆಬ್ರಿ : ಸಾಮಾನ್ಯ ಜ್ವರದಂತಹ ಕೊವೀಡ್ ವೈರಸನ್ನು ಭಾರೀ ದೊಡ್ಡ ಕಾಯಿಲೆ ತರ ಬಿಂಬಿಸಿ ಜನತೆ ತತ್ತರಿಸಿ ಹೋಗುವಂತೆ ಮಾಡಲಾಗಿದೆ. ಕೋವಿಡ್‌ ನಿಯಮದಲ್ಲಿ ಸಾಮಾನ್ಯ ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯ ಎಂಬಂತಾಗಿದೆ. ಬಡವರನ್ನು ಕೇಳುವವರೇ ಇಲ್ಲ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ತೀವ್ರ ಅಸಮಾಧಾನ್ಯ ವ್ಯಕ್ತಪಡಿಸಿದರು. ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಯಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಚ್ಚೇದಿನ್ ಅಂದರೆ ಇದೆನಾ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು. ಕಾಂಗ್ರೆಸ್ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಈಗ ಅವೆಲ್ಲವನ್ನು ಬಿಜೆಪಿ ಸರಕಾರ ಮಾರಾಟ ಮಾಡುತ್ತಾ ಕಾಂಗ್ರೆಸ್ ದೇಶಕ್ಕೆ ಏನು ನೀಡಿದೆ ಎಂದು ಪ್ರಶ್ನಿಸುತ್ತಾರೆ. ಕೊರೋನ ಸಂಕಷ್ಟದ ನಡುವೆ ಆರ್ಥಿಕ ಕುಸಿತವಾಗಿದೆ. ಲಾಕ್ ಡೌನ್ ನಿಂದಾಗಿ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸಮಸ್ಯೆಯನ್ನು ಸರಿಪಡಿಸುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಘಲಕ್ ದರ್ಬಾರ್ ನಡೆಸುತ್ತಿವೆ ಎಂದು ಮಂಜುನಾಥ ಪೂಜಾರಿ ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!