Tuesday, December 7, 2021
spot_img
Homeಸ್ಥಳೀಯ ಸುದ್ದಿಹೆಬ್ರಿ : ಟಿಪ್ಪರ್ ಹರಿದು ಕ್ಲೀನರ್ ಕಾಲು ಜಖಂ

ಹೆಬ್ರಿ : ಟಿಪ್ಪರ್ ಹರಿದು ಕ್ಲೀನರ್ ಕಾಲು ಜಖಂ

ಕ್ರಶರ್ ನಲ್ಲಿ ಜಲ್ಲಿ ತುಂಬಿಸುತ್ತಿದ್ದ ವೇಳೆ ದುರ್ಘಟನೆ

ಹೆಬ್ರಿ : ಟಿಪ್ಪರ್‌ ಹರಿದು ಕ್ಲೀನರ್‌ನ ಕಾಲು ಜಖಂಗೊಂಡ ಘಟನೆ ಮಂಗಳವಾರ ಹೆಬ್ರಿ ತಾಲೂಕು ನಾಲ್ಕೂರು ಗ್ರಾಮ ಮಿಯ್ಯಾರು ಎಂಬಲ್ಲಿಯ ಯೂನಿಟಿ ರಾಕ್ ಕ್ರಶರ್ ನಲ್ಲಿ ಸಂಭವಿಸಿದೆ. ಸೆ. 1ರಂದು ಬೆಳಗ್ಗೆ ಟಿಪ್ಪರ್‌ಗೆ ಜಲ್ಲಿ ತುಂಬಿಸಲು ಚಾಲಕ ಲಾರಿಯನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು, ಪರಿಣಾಮ ಆತನ ಕಾಲು ಜಖಂಗೊಂಡಿದೆ.
ಪ್ರವೀಣ್ ಹೆಗ್ಡೆ ಅವರ ಮಾಲಕತ್ವದ ಕ್ರಶರಿನಲ್ಲಿ ಕಾರ್ಮಿಕನಾಗಿದ್ದ ಆಸ್ಸಾಂ ಮೂಲದ ಪದುಂ ಗೋರಾ ಎಂಬಾತ ಗಾಯಗೊಂಡಿದ್ದು, ಟಿಪ್ಪರ್ ಚಾಲಕ ಪರಮೇಶ್ ಎಂಬಾತನ ನಿರ್ಲಕ್ಷ್ಯತನದ ಚಾಲನೆಯೇ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ಕ್ರಶರ್ ಹಾಗೂ ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೆ ಮಾಲೀಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಪದೇಪದೇ ಅವಘಡಗಳು ಸಂಭವಿಸುತ್ತಿದ್ದು,4 ವರ್ಷದ ಹಿಂದೆ ಶಿವಪುರ ಕ್ರಶರ್ ಒಂದರಲ್ಲಿ ಲಾರಿಗೆ ಜಲ್ಲಿ ಲೋಡ್ ಮಾಡುವ ಸಲುವಾಗಿ ಚಾಲಕ ಟಿಪ್ಪರನ್ನು ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ  ಜಲ್ಲಿ ತುಂಬಿಸಿಡಲಾಗಿದ್ದ ಕಂಟೈನರ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಬ್ಬಿಣದ ಕಂಟೈನರ್ ಕುಸಿದು ಚಾಲಕ ಹಾಗೂ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!