Saturday, October 16, 2021
spot_img
Homeಸ್ಥಳೀಯ ಸುದ್ದಿಎಪಿಎಂಸಿ ಪ್ರಾಂಗಣದಲ್ಲಿ ವಾರದ ಸಂತೆಗೆ ತೀರ್ಮಾನ : ರತ್ನಾಕರ ಅಮೀನ್

ಎಪಿಎಂಸಿ ಪ್ರಾಂಗಣದಲ್ಲಿ ವಾರದ ಸಂತೆಗೆ ತೀರ್ಮಾನ : ರತ್ನಾಕರ ಅಮೀನ್

1 ಕೋಟಿ ರೂ. ವೆಚ್ಚದಲ್ಲಿ ರೈತ ಸಭಾಭವನ

2 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ಪ್ರಾಂಗಣ ಅಭಿವೃದ್ಧಿ

ಕಾರ್ಕಳ : ಕಾರ್ಕಳ ಎಪಿಎಂಸಿ ಪ್ರಾಂಗಣದಲ್ಲಿ ವಾರದ ಸಂತೆ ನಡೆಸಲು ತೀರ್ಮಾನಿಸಲಾಗಿದೆ. ರೈತರ ಶ್ರೇಯೋಭಿವೃದ್ದಿಗಾಗಿ ಎಪಿಎಂಸಿ ವತಿಯಿಂದ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರತ್ನಾಕರ ಅಮೀನ್ ಅಜೆಕಾರು ಹೇಳಿದ್ದಾರೆ.
ಆ. 31ರಂದು ಎಪಿಎಂಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಲ್ಲಿ ಹಾಗೂ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದಕ್ಕೆ ಬೇಕಾದ ಎಲ್ಲ ಪೂರಕ ವ್ಯವಸ್ಥೆಯನ್ನು ಎಪಿಎಂಸಿಯಿಂದ ಕಲ್ಪಿಸಲಾಗಿದೆ ಎಂದರು.

ಕಾರ್ಕಳ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಬರುವ ರೈತ ಬಾಂಧವರು ಅಧಿಕೃತ ಲೈಸೆನ್ಸ್ ಹೊಂದಿರುವ ಪೇಟೆ ಕಾರ್ಯಕರ್ತರುಗಳಿಗೆ, ತಾವು ತಂದಿರುವ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ, ಲೆಕ್ಕ ತೀರುವಳಿ ಪತ್ರ ಪಡೆದು ಅಂದೇ ನಗದು ಅಥವಾ ಬ್ಯಾಂಕ್ ಮೂಲಕ ಮೊತ್ತವನ್ನು ಪಾವತಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ರೈತ ಕುಟುಂಬ ವರ್ಗದವರು ಶುಭ ಕಾರ್ಯಗಳನ್ನು ನಡೆಸಲು ಸಮಿತಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರೈತ ಸಭಾಭವನ ನಿರ್ಮಾಣ ಹಾಗೂ 33 ಲಕ್ಷ ರೂ.ಗಳಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ನಿಯಮ 60ರಡಿ ತಾಲೂಕಿನಾದ್ಯಂತ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ.
ಕೇಂದ್ರ ಸರಕಾರದ ನಬಾರ್ಡ್ ಯೋಜನೆಯಡಿ 2 ಕೋಟಿ ರೂ. ಮೊತ್ತದಲ್ಲಿ ಕಾರ್ಕಳ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ಕಾಂಕ್ರಿಟ್ ರಸ್ತೆ ಚರಂಡಿ, ಮುಚ್ಚು ಹರಾಜುಕಟ್ಟೆ, ಶೌಚಾಲಯಗಳ ನಿರ್ಮಾಣ, ಬೀದಿ ದೀಪಗಳ ದುರಸ್ತಿ ಹಾಗೂ ಇತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ.
ಪುರಸಭೆ ಮಾಸಿಕ ಸಭೆಯಲ್ಲಿ ಚರ್ಚಿಸಿರುವಂತೆ ಮುಂದಿನ ದಿನಗಳಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರು ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ವಾರದ ಸಂತೆಯನ್ನು ನಡೆಸಲು ತೀರ್ಮಾನಿಸಲಾಗಿದೆ.
ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಪೇಟೆ ಕಾರ್ಯಕರ್ತರುಗಳಿಗೆ ಅಂಗಡಿ-ಗೋದಾಮುಗಳನ್ನು ಲೀವ್ ಆ್ಯಂಡ್ ಲೈಸೆನ್ಸ್ ಶುಲ್ಕ ಆಧಾರದ ಮೇಲೆ ಹಂಚಿಕೆ ಮಾಡಲು ಪ್ರಕಟಣೆ ಹೊರಡಿಸಿ ಕ್ರಮ ವಹಿಸಲಾಗಿದೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ರೈತರು ತಾವು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ದರ ದೊರೆಯುವ ತನಕ ಅವುಗಳನ್ನು ಸೂಕ್ತ ರೀತಿ ಸಂರಕ್ಷಿಸಲು ಅನುಕೂಲವಾಗುವಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಲೈಸೆನ್ಸ್ ಹೊಂದಿರುವ ಸಹಕಾರ ಸಂಘಕ್ಕೆ ಅಥವಾ ಪೇಟೆ ಕಾರ್ಯಕರ್ತರುಗಳಿಗೆ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಶೀಥಲ ಗೃಹ ನಿರ್ಮಿಸಲು ಶೇ.50ರಷ್ಟು ದರದಲ್ಲಿ ನಿವೇಶನ ಹಂಚಿಕೆ ಅಥವಾ ಲೀವ್ ಆ್ಯಂಡ್ ಲೈಸೆನ್ಸ್ ಆಧಾರದ ಮೇಲೆ ಗೋದಾಮು ಹಂಚಿಕೆ ಮಾಡಲು ಕ್ರಮ ವಹಿಸಲಾಗಿದೆ.
ಅಕ್ಟೋಬರ್ 2021ರ ಮಾಹೆಯಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಪ್ರಗತಿಪರ ರೈತರನ್ನು ಗುರುತಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿಸಲು ತೀರ್ಮಾನಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಸದಸ್ಯರುಗಳಾದ ಮಾಪಾಲು ಜಯವರ್ಮ ಜೈನ್, ಮುಟ್ಲುಪಾಡಿ ಸತೀಶ್ ಶೆಟ್ಟಿ, ದಿನೇಶ್ ಪೈ ಮುನಿಯಾಲು, ವಾದಿರಾಜ ಶೆಟ್ಟಿ ಮುಂಡ್ಕೂರು, ಜೆರಾಲ್ಡ್ ಡಿಸಿಲ್ವ ಮಿಯ್ಯಾರ್, ಪ್ರಕಾಶ್ ಬಲಿಪ ಮಿಯ್ಯಾರ್, ದೇವಾನಂದ ಶೆಟ್ಟಿ ಸಾಣೂರು, ಜಯರಾಮ ಆಚಾರ್ಯ ನಕ್ರೆ, ಎಚ್.ಸಂಜೀವ ನಾಯ್ಕ್, ನಾರಾಯಣ ಪೂಜಾರಿ ಈದು, ಜ್ಯೋತಿ ರಮೇಶ್, ವಸಂತಿ ಮತ್ತು ಸುಮನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!