Tuesday, September 28, 2021
spot_img
Homeಸ್ಥಳೀಯ ಸುದ್ದಿರೈತರಿಗೆ ಶೇ. 38 ಪ್ರಮಾಣದಲ್ಲಿ ಉಚಿತ ವಿದ್ಯುತ್‌ ಪೂರೈಕೆ -ಸುನಿಲ್‌ ಕುಮಾರ್‌

ರೈತರಿಗೆ ಶೇ. 38 ಪ್ರಮಾಣದಲ್ಲಿ ಉಚಿತ ವಿದ್ಯುತ್‌ ಪೂರೈಕೆ -ಸುನಿಲ್‌ ಕುಮಾರ್‌

ಕಾರ್ಕಳ-ಹೆಬ್ರಿ ಹೆಚ್ಚುವರಿ ಎಲ್ಲ ಟಿಸಿ ಬೇಡಿಕೆ ಈಡೇರಿಕೆ

ಇಲಾಖೆಯಯಲ್ಲಿ ಹೊಸತನ ನಿಶ್ವಿತ

ಕಾರ್ಕಳ : ಮುಂದಿನ 17 ತಿಂಗಳ ಅವಧಿಯೊಳಗಡೆ ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯಲ್ಲಿ ಹೊಸತನ ತರುವುದು ನಿಶ್ವಿತ. ಇಂಧನ ಇಲಾಖೆಯಲ್ಲಿ ಸಾಕಷ್ಟು ರೀತಿಯ ಸವಾಲಿದೆ. ಇಲಾಖೆಯಲ್ಲಿ ಉತ್ಪಾದನೆಯಾಗುತ್ತಿರುವ ಶೇ. 38 ವಿದ್ಯುತ್‌ ರೈತರಿಗೆ ಉಚಿತವಾಗಿ ಪೂರೈಕೆಯಾಗುತ್ತಿದೆ. ದೇಶದಲ್ಲಿ ಯಾವೊಂದು ರಾಜ್ಯದಲ್ಲೂ ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್‌ ನೀಡಲಾಗುತ್ತಿಲ್ಲ. ಪ್ರತಿದಿನ 7 ಗಂಟೆಗಳ ಕಾಲ ರೈತರಿಗೆ ವಿದ್ಯುತ್‌ ಒದಗಿಸುವ ಬೇಡಿಕೆಯಿದ್ದು ವಿದ್ಯುತ್‌ ಉತ್ಪಾದನೆ ಪ್ರಮಾಣ ನೋಡಿಕೊಂಡು ಈ ಕುರಿತು ತೀರ್ಮಾನಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ಅವರು ಆ. 28ರಂದು ರೆಂಜಾಳ ಪಂಚಾಯತ್‌ನಲ್ಲಿ ನಡೆದ ಜನ-ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ‌

ಸೀಮಿತ ಅವಧಿಯಲ್ಲಿ ಕಾರ್ಕಳ ಹೆಬ್ರಿ ತಾಲೂಕಿನ 34 ಪಂಚಾತಯತ್‌ಗಳನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ್ದೇವೆ. ಇದು ನಮ್ಮ ಕರ್ವತ್ಯವೂ ಹೌದು. ಕಾರ್ಕಳದ ಜನತೆ ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ ಪರಿಣಾಮ ನಾನಿಂದು ಸಚಿವನಾಗಿದ್ದೇನೆ. ಸಚಿವ ‍ಸ್ಥಾನದ ಪೂರ್ತಿ ಕೀರ್ತಿ ಕಾರ್ಕಳದ ಜನತೆಗೆ ಅರ್ಪಿಸುತ್ತಿದ್ದೇನೆ ಎಂದು ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ನಿರೀಕ್ಷೆ ಸಹಜವಾಗಿ ಹೆಚ್ಚಿದೆ
ಸಚಿವನಾದ ಬಳಿಕ ಕ್ಷೇತ್ರದ ಜನತೆ ನಿರೀಕ್ಷೆ ಸಹಜವಾಗಿ ಜಾಸ್ತಿಯಾಗಿದೆ. ಕಾರ್ಕಳ ಹೆಬ್ರಿ ತಾಲೂಕಿನ ಎಲ್ಲ ಗ್ರಾಮಗಳ ಟಿಸಿ ಬೇಡಿಕೆಯನ್ನೂ ಶೀಘ್ರದಲ್ಲೇ ಈಡೇರಿಸುತ್ತೇನೆ. ಸುಮಾರು 200 ರಿಂದ 300 ಟಿಸಿ ಅಳವಡಿಕೆ ಬೇಡಿಕೆಯಿದ್ದು, ಈಗಾಗಲೇ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಪದವು, ರೆಂಜಾಳ, ಮುನಿಯಾಲು ಶಾಲೆಗಳನ್ನು ಪ್ರಮುಖ ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದು. ಕಟ್ಟಡ ಮಾತ್ರವಲ್ಲದೇ ಶೈಕ್ಷಣಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಪೂರಕ ಯೋಜನೆ ರೂಪಿಸಲಾಗುವುದು. ನಾನು ಸಚಿವನಾಗಿ ಯಶಸ್ವಿಯಾಗಬೇಕಾದರೆ ಕಾರ್ಕಳದ ಜನತೆ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡಿ, ನನಗೆ ಶಕ್ತಿ ತುಂಬಬೇಕು. ಸಚಿವನಾದ ಕಾರಣ ಕಾರ್ಕಳದಲ್ಲಿ ಹೆಚ್ಚು ಸಮಯ ಕಳೆಯುತ್ತಿಲ್ಲ ಎಂದು ತಿಳಿಯಬೇಡಿ. ಏನೇ ಸಮಸ್ಯೆಯಿದ್ದರೂ ಕಾರ್ಕಳ ಕಚೇರಿಯನ್ನು ಸಂಪರ್ಕಿಸಿ. ನಾನೆಲ್ಲೇ ಇದ್ದರೂ ಪತ್ರಗಳ ಪರಿಶೀಲಿಸಿ, ಸ್ಪಂದಿಸುತ್ತೇನೆ ಎಂದು ಸುನಿಲ್‌ ಕುಮಾರ್‌ ಭರವಸೆ ನೀಡಿದರು.

ಎಪಿಎಂಸಿ ಅಧ್ಯಕ್ಷ ರತ್ನಾಕರ್‌ ಅಮೀನ್‌, ಪಂಚಾಯತ್‌ ಅಧ್ಯಕ್ಷೆ ದೀಪಿಕಾ ಶೆಟ್ಟಿ, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಅಸ್ರಣ್ಣ ಸುಬ್ರಹ್ಮಣ್ಯ ಉಪಾಧ್ಯಾಯ, ಮಹಾವೀರ ಹೆಗ್ಡೆ ಬ್ರಾಹ್ಮಬೆಟ್ಟು, ದಿವ್ಯಾ ಗಿರೀಶ್‌ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್‌ ರೆಂಜಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಿಡಿಒ ಶಂಕರ್‌ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!