ಕಾರ್ಕಳಕ್ಕೆ ಬನ್ನಿ ನಾಯಕರೇ

ಕಾಂಗ್ರೆಸ್ ಕಾರ್ಯಕರ್ತರಿಂದ ಟ್ವಿಟ್ಟರ್‌ ಅಭಿಯಾನ

ಕಾರ್ಕಳ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಉಲ್ಲೇಖಿಸಿ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರು ಕಾರ್ಕಳಕ್ಕೆ ಬನ್ನಿ ಎಂಬ ಟ್ವಿಟ್ಟರ್ ಅಭಿಯಾನ ಆ. 27ರಂದು ಪ್ರಾರಂಭಿಸಿದ್ದಾರೆ. ಮಾಜಿ ಶಾಸಕ ಗೋಪಾಲ ಭಂಡಾರಿಯವರ ನಿಧನದ ಅನಂತರ ಕಾಂಗ್ರೆಸ್ ಕಾರ್ಯಕರ್ತರು ಅನಾಥರಾಗಿದ್ದಾರೆ.‌ ನೂರಾರು ಕಾರ್ಯಕರ್ತರು ಪಕ್ಷದಿಂದ ದೂರ ಸರಿದು ತಟಸ್ಥರಾಗಿದ್ದಾರೆ. ಕೆಲವರು ಬಿಜೆಪಿಯ ಕಡೆ ಮುಖಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಕಾರ್ಕಳಕ್ಕೆ ನಾಯಕರು ಬರಬೇಕೆಂದು ಟ್ವಿಟ್ಟರ್‌ನಲ್ಲಿ ಹಲವಾರು ಮಂದಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕಾರ್ಕಳಕ್ಕೆ ಸೂಕ್ತ ನಾಯಕನ ಅಗತ್ಯವಿದೆ. ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಅನಂತರ‌ ಬ್ಲಾಕ್ ಮಟ್ಟದ ಸಂಘಟನೆಗೆ ಶಕ್ತಿ ಕೊಡುವ ಕಾರ್ಯವಾಗಬೇಕಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಮುನಿಯಾಲು ಉದಯ ಶೆಟ್ಟಿ ಅವರ ನಡುವಿನ ಗೊಂದಲ ನಿವಾರಣೆಯಾಗಬೇಕಿದೆ ಎಂದು ಕಾರ್ಕಳದ ಕಾರ್ಯಕರ್ತರು ಟ್ವೀಟ್ ಮಾಡುವ ಮೂಲಕ ರಾಜ್ಯ‌ ನಾಯಕರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಬ್ಲಾಕ್‌ ಕಾಂಗ್ರೆಸ್‌ ಪುನರ್‌ ರಚನೆ ಸಂದರ್ಭ ನಿಷ್ಠಾವಂತರಿಗೆ, ಪಕ್ಷಕ್ಕಾಗಿ ದುಡಿದವರಿಗೆ ಮಣೆ ಹಾಕಿಲ್ಲ ಎಂಬ ಅಸಮಾಧಾನವೂ ಕಾಂಗ್ರೆಸ್‌ನ ಒಂದು ಬಣದಲ್ಲಿದೆ.









































































































































































error: Content is protected !!
Scroll to Top