Wednesday, January 26, 2022
spot_img
Homeಸ್ಥಳೀಯ ಸುದ್ದಿಕೇಂದ್ರ ಸರಕಾರದಿಂದ ದೇಶದ ಭವಿಷ್ಯಕ್ಕೆ ಕೊಡಲಿ ಏಟು- ಬಿಪಿನ್‌ ಚಂದ್ರ ಪಾಲ್‌

ಕೇಂದ್ರ ಸರಕಾರದಿಂದ ದೇಶದ ಭವಿಷ್ಯಕ್ಕೆ ಕೊಡಲಿ ಏಟು- ಬಿಪಿನ್‌ ಚಂದ್ರ ಪಾಲ್‌

ಲೀಸಿನ ಹೆಸರಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆ ಖಾಸಗಿಯವರಿಗೆ ಮಾರಾಟ

ಕಾರ್ಕಳ : ದೇಶದ ಆರ್ಥಿಕ ಸ್ವಾಯತ್ತತೆ, ಉದ್ಯೋಗ ಮತ್ತು ಮೂಲ ಸೌಲಭ್ಯ ಸಾಧನೆಯ ಗುರಿಯೊಂದಿಗೆ ಕಾಂಗ್ರೆಸ್ ತನ್ನ ಆಡಳಿತದುದ್ದಕ್ಕೂ ಕಟ್ಟಿ ಬೆಳೆಸಿದ ಸರಕಾರೀ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರಕಾರ ದೇಶದ ಭವಿಷ್ಯಕ್ಕೆ ಕೊಡಲಿ ಏಟು ಹಾಕಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ 7 ವರ್ಷಗಳಿಂದ ದೇಶದಲ್ಲಿ 100 ಲಕ್ಷ ಕೋಟಿ ರೂ. ಆಧುನಿಕ ಮೂಲ ಸೌಲಭ್ಯ ಅಭಿವೃದ್ದಿಯ ಯೋಜನೆಗಳನ್ನು ಜಾರಿಗೊಳಿಸಿ ಲಕ್ಷ ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳುತ್ತಲೇ ಜನರ ದಿಕ್ಕು ತಪ್ಪಿಸಿ, ಇದೀಗ ನೇಶನಲ್ ಮೊನಿಟೈಸೇಶನ್ ಪೈಪ್ಲಾಯಿನ್ ಯೋಜನೆಯ ಹೆಸರಲ್ಲಿ 6 ಲಕ್ಷ ಕೋಟಿಗೆ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು, ಅವುಗಳಲ್ಲಿ ಅತೀ ಮುಖ್ಯವಾಗಿ ದೇಶದ ಬೆನ್ನೆಲುಬಾಗಿರುವ 26,700 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳು, ಪ್ರಮುಖ ರೈಲ್ವೆ ಲಾಯಿನ್ ಗಳೂ ಸೇರಿ 150 ರೈಲುಗಳು ಮತ್ತು 400 ರೈಲ್ವೆ ಸ್ಟೇಶನ್ ಗಳು ಹಾಗೂ ಗೂಡ್ಸ್ ಶೆಡ್ಡುಗಳು, 2.5೦ ಲಕ್ಷ ಕಿಮೀ. ಉದ್ದದ ಬಿಎಸ್ಎನ್ಎಲ್, ಎಂಟಿಎನ್ಎಲ್, ಒಪ್ಟಿಕಲ್ ಫೈಬರ್ ಲಾಯಿನ್ ಗಳು, 170 ಕಲ್ಲಿದ್ದಲು ಹಾಗೂ ಕಬ್ಬಿಣದ ಅದುರು ಗಣಿಗಳು, 25 ಪ್ರಮುಖ ವಿಮಾನ ನಿಲ್ದಾಣಗಳು, 9 ನೇಶನಲ್ ಸ್ಟುಡಿಯಂಗಳು, ನೇಶನಲ್ ಪವರ್ ಪ್ಲೇಂಟುಗಳು ಹಾಗೂ ಪವರ್ ಜನರೇಟಿಂಗ್ ಯೂನಿಟ್‌, ನೇಶನಲ್ ಗ್ಯಾಸ್ ಪೈಪ್ ಲಾಯಿನ್, ಪೆಟ್ರೋಲಿಯಂ ಪೈಪು ಲಾಯಿನ್ ಗಳು ಹಾಗೂ ದೇಶದ ಪ್ರಮುಖ ಆಹಾರ ಸಂಗ್ರಹಾಗಾರ ಮತ್ತು ಉಗ್ರಾಣಗಳನ್ನು ತಮ್ಮದೇ ಜನರಿಗೆ ಲೀಸಿನ ಹೆಸರಲ್ಲಿ ಮಾರುತ್ತಿರುವುದು ಆಳುವ ಸರಕಾರ ದೇಶವಾಸಿಗಳಿಗೆ ಮಾಡಿದ ಮಹಾಮೋಸವಾಗಿದೆ. ಪರಿಣಾಮವಾಗಿ ದೇಶದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸುಮಾರು 2 ಕೋಟಿ ಉದ್ಯೋಗ ನಷ್ಟವಾಗಲಿದ್ದು ಇದು ಯುವ ಜನಾಂಗದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

ಸಂಬಂಧಪಟ್ಟ ಸಂಸ್ಥೆಗಳ ಯೂನಿಯನ್ ಗಳಿಗಾಗಲಿ, ಪಾರ್ಲಿಮೆಂಟಿನಲ್ಲಿ ಪ್ರತಿ ಪಕ್ಷಗಳಿಗಾಗಲಿ ಈ ಬಗ್ಗೆ ಚರ್ಚಿಸುವ ಅವಕಾಶ ನೀಡದೇ ಸರಕಾರ ಏಕ ಪಕ್ಷೀಯವಾಗಿ ತೆಗೆದುಕೊಂಡ ಈ ನಿರ್ಣಯ ಸಂವಿಧಾನ ವಿರೋಧಿಯಾಗಿದೆ. ಈಗಾಗಲೇ ಕೃಷಿ ಮಸೂದೆಯನ್ನು ಇದೇ ರೀತಿ ಜಾರಿಗೊಳಿಸುವ ಮೂಲಕ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ಹಸ್ತಕ್ಷೇಪಕ್ಕೆ ಒಳಪಡಿಸಿದ ಸರಕಾರ ಇದೀಗ ಈ ಯೋಜನೆಯ ಮೂಲಕ ಇಡೀ ದೇಶವನ್ನೆ ಖಾಸಗಿಯವರ ತೆಕ್ಕೆಗೆ
ನೀಡುತ್ತಿದೆ. ಕಾಂಗ್ರೆಸ್ ದೇಶವನ್ನು ಮಾರುತ್ತಿದೆ ಎಂದು ವೇದಿಕೆಗಳಲ್ಲಿ ಕಾಂಗ್ರೆಸ್ಸಿನ ವಿರುದ್ದ ಮಿಥ್ಯಾರೋಪ ಹೊರಿಸಿ ಟೀಕಿಸುತ್ತ ದೇಶದ ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ ಇದೀಗ ತಾನೇ ಸ್ವತಃ ಅಪ್ರಬುದ್ಧ ಆರ್ಥಿಕ ನೀತಿಯ ಅರ್ಥಮಂತ್ರಿಯ ಮೂಲಕ ದೇಶವನ್ನು ಖಾಸಗಿಯವರಿಗೆ ಮಾರಲು ಹೊರಟಿರುವುದು ವಿಪರ್ಯಾಸ ಎಂದು ಬಿಪಿನ್‌ಚಂದ್ರ ಪಾಲ್‌ ಟೀಕಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!