Saturday, October 16, 2021
spot_img
Homeಸ್ಥಳೀಯ ಸುದ್ದಿನೆಲ್ಲಿನಿಟ್ಟೆ ರಾಜರಾಜೇಶ್ವರಿ ಸದ್ಗುರು ನಿತ್ಯಾನಂದ ಕ್ಷೇತ್ರ

ನೆಲ್ಲಿನಿಟ್ಟೆ ರಾಜರಾಜೇಶ್ವರಿ ಸದ್ಗುರು ನಿತ್ಯಾನಂದ ಕ್ಷೇತ್ರ

ಜೀರ್ಣೋದ್ಧಾರ ಸಂಕಲ್ಪ ಸಭೆ, ಬಾಲಾಲಯ ಶಿಲಾನ್ಯಾಸ

ಕಾರ್ಕಳ : ಶ್ರೀ ರಾಜರಾಜೇಶ್ವರಿ ಹಾಗೂ ನಿತ್ಯಾನಂದ ಸ್ವಾಮಿ ಕ್ಷೇತ್ರ ನೆಲ್ಲಿ ನಿಟ್ಟೆ ಇಲ್ಲಿನ ಜೀರ್ಣೋದ್ಧಾರ ಸಂಕಲ್ಪ ಸಭೆ ಹಾಗೂ ಬಾಲಾಲಯದ ಶಿಲಾನ್ಯಾಸ ಆ. 27ರಂದು ನಡೆಯಿತು. ಗುಂಡಿಬೈಲ್ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನೆರವೇರಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧೀರ್ ಹೆಗ್ಡೆ ಬೈಲೂರು ಮಾತನಾಡಿ, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಮೊದಲ ಹೆಜ್ಜೆಯಿದು. ಜೀರ್ಣೋದ್ಧಾರ ಕಾರ್ಯ ವೇಗವಾಗಿ ನಡೆಯುವ ನಿಟ್ಟಿನಲ್ಲಿ ಊರಿನ ಸಮಸ್ತ ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿ ತುಮಕೂರು ಜಿಲ್ಲಾ ಉಪಾಧ್ಯಕ್ಷ ಬಿ.ಎನ್. ಚಂದ್ರಶೇಖರ್, ಜಿ.ಪಂ. ನಿಕಟಪೂರ್ವ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ವಿಜಯ್ ಶೆಟ್ಟಿ, ಮಹಾಬಲ ಸುವರ್ಣ, ಸತೀಶ್ ಪೂಜಾರಿ, ಪ್ರವೀಣ್ ಸಾಲ್ಯಾನ್, ಬಾಲಕೃಷ್ಣ ಹೆಗ್ಡೆ, ಕೆ.ಜಿ. ರಾಮಪ್ಪ, ಜಗನ್ನಾಥ ಪೂಜಾರಿ ಉಪಸ್ಥಿತರಿದ್ದರು.

ಸುಮಿತ್ ಶೆಟ್ಟಿ ಕೌಡೂರು ಸ್ವಾಗತಿಸಿ, ದಿನೇಶ್ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಕೆ. ಆರ್. ವಂದಿಸಿದರು. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!