Sunday, October 2, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ಆ. 27 ರಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಲಭ್ಯ

ಕಾರ್ಕಳ : ಆ. 27 ರಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಲಭ್ಯ

ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಆ. 27ರಂದು ಕೋವಿಡ್‌ ವ್ಯಾಕ್ಸಿನ್‌ ಮೆಗಾ ಮೇಳ – 04 ನಡೆಯುವ ನಿಟ್ಟಿನಲ್ಲಿ 7, 900 ಕೋವಿಶೀಲ್ಡ್‌ ಲಸಿಕೆ ನೀಡಲಾಗುವುದು. ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ 1 ಸಾವಿರ ಡೋಸ್‌, ಗ್ರಾಮೀಣ ಪ್ರದೇಶದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ ಪ್ರಥಮ ಡೋಸ್‌ ಪಡೆದು 84 ದಿನ ಕಳೆದ ಫಲಾನುಭವಿಗಳು ದ್ವಿತೀಯ ಡೋಸ್‌ ಪಡೆಯಬಹುದಾಗಿದೆ. 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಲಸಿಕೆ ಪಡೆಯಲು ಗುರುತಿನ ಚೀಟಿ ಮತ್ತುಮೊಬೈಲ್‌ ಕಡ್ಡಾಯವಾಗಿ ತರುವುದು. ಲಿಸಿಕಾ ಶಿಬಿರಗಳ ಮಾಹಿತಿಗಾಗಿ ಹತ್ತಿರದ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿ, ಆರೋಗ್ಯ ಕಾರ್ಯಕರ್ತರು, ಆಶಾಕಾರ್ಯಕರ್ತೆಯರನ್ನುಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!