Wednesday, January 19, 2022
spot_img
Homeಸ್ಥಳೀಯ ಸುದ್ದಿನಿಟ್ಟೆ ತಾಂತ್ರಿಕ ಕಾಲೇಜಿಗೆ ಕೆ.ಎಸ್.ಸಿ.ಎಸ್.ಟಿ. ಐಪಿ ಪ್ರಶಸ್ತಿ

ನಿಟ್ಟೆ ತಾಂತ್ರಿಕ ಕಾಲೇಜಿಗೆ ಕೆ.ಎಸ್.ಸಿ.ಎಸ್.ಟಿ. ಐಪಿ ಪ್ರಶಸ್ತಿ

ನಿಟ್ಟೆ : ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಕೆ.ಎಸ್.ಸಿ.ಎಸ್.ಟಿ. ಐಪಿ ಅವಾರ್ಡ್ & ರಿವಾರ್ಡ್ 2021 ಕಾರ್ಯಕ್ರಮದಡಿಯಲ್ಲಿ ಪ್ರಶಸ್ತಿ ಲಭಿಸಿದೆ. ಆ.24 ರಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಕೆ.ಎಸ್.ಸಿ.ಎಸ್.ಟಿ.ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಹೇಮಂತ್ ಕುಮಾರ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಘೋಷಿಸಿದರು. ಕಳೆದ ಹಲವು ವರ್ಷಗಳಿಂದ ನಿಟ್ಟೆ ತಾಂತ್ರಿಕ ಕಾಲೇಜು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ರಿಸರ್ಚ್ & ಪೇಟೆಂಟಿಂಗ್ ವಿಷಯದಲ್ಲಿ ನೀಡುತ್ತಿರುವ ಕೊಡುಗೆ ಪರಿಗಣಿಸಿ ಕೆ.ಎಸ್.ಸಿ.ಎಸ್.ಟಿ. ಸಂಸ್ಥೆಯು ಈ ಪ್ರಶಸ್ತಿಯನ್ನು ಕಾಲೇಜಿಗೆ ಘೋಷಿಸಿರುವುದು ಹರ್ಷತಂದಿದೆ ಎಂದು ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!