Sunday, September 26, 2021
spot_img
Homeಸ್ಥಳೀಯ ಸುದ್ದಿಯುವಕರಿಬ್ಬರು ನೀರು ಪಾಲು

ಯುವಕರಿಬ್ಬರು ನೀರು ಪಾಲು

ಶಂಕರನಾರಾಯಣ : ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್‌ಮಕ್ಕಿ ಸಮೀಪದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಬಾಲಕರಿಬ್ಬರು ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
9ನೇ ಮೈಲ್‌ಕಲ್ಲು ನಿವಾಸಿ ದಿ. ಕಾಳು ನಾಯ್ಕ ಎಂಬವರ ಮಗ ಮೋಹನ ನಾಯ್ಕ (21) ಹಾಗೂ ಮಹಾಬಲ ನಾಯ್ಕ ಎಂಬವರ ಮಗ ಸುರೇಶ (19) ಸಾವನ್ನಪ್ಪಿದವರು.

ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದ ಇಬ್ಬರೂ ತಡರಾತ್ರಿಯ ವರೆಗೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಕುಂಟುಹೊಳೆ ಕುಪ್ಪರಿಗೆಗುಂಡಿ ಸಮೀಪ ಇಬ್ಬರ ಚಪ್ಪಲಿ ಕಾಣಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಬಾಲಕರ ಮೃತದೇಹ ಪತ್ತೆಯಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!