Saturday, October 16, 2021
spot_img
Homeಸ್ಥಳೀಯ ಸುದ್ದಿಮುಂಡ್ಕೂರು : ಕಾರು‌ ಡಿಕ್ಕಿಯಾಗಿ ದಂಪತಿಗೆ ಗಾಯ

ಮುಂಡ್ಕೂರು : ಕಾರು‌ ಡಿಕ್ಕಿಯಾಗಿ ದಂಪತಿಗೆ ಗಾಯ


ಕಾರ್ಕಳ : ಕಾರೊಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನಲ್ಲಿದ್ದ ದಂಪತಿ ಗಾಯಗೊಂಡಿದ್ದಾರೆ. ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ಶನಿವಾರ ಸಂಜೆ ಕಾರು ಚಾಲಕ ಸನತ್‌ ಎಂಬವರು ಓವರ್‌ ಟೇಕ್‌ ಮಾಡುವ ಭರದಲ್ಲಿ ಮುಲ್ಲಡ್ಕ ಗ್ರಾಮದ ಚೈತ್ರಾ ಮೂಲ್ಯ ಹಾಗೂ ಅವರ ಪತಿ ಸಂತೋಷ್ ಮೂಲ್ಯ ಗಾಯಗೊಂಡಿರುತ್ತಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಕಲ್ ಗೆ ಕಾರು ಡಿಕ್ಕಿ: ಸವಾರನಿಗೆ ಗಾಯ
ಕಾರ್ಕಳ : ಸೈಕಲ್ ಗೆ ಕಾರು ಡಿಕ್ಕಿಯಾಗಿ ಸೈಕಲ್ ಸವಾರ ಗಾಯಗೊಂಡಿದ್ದಾರೆ. ಕಾರ್ಕಳ ನಗರದ ತೆಳ್ಳಾರು ರಸ್ತೆಯ ರಾಘವೇಂದ್ರ ಮಠದ ಬಳಿಯ ನಿವಾಸಿ ಸಂದೀಪ್ ಶೆಣೈ (38) ಎಂಬವರು ಶನಿವಾರ ಸಂಜೆ ತನ್ನ ಮನೆಯಿಂದ ಕಾರ್ಕಳ ಪೇಟೆಯ ಕಡೆಗೆ ಸೈಕಲಿನಲ್ಲಿ ಹೋಗುತ್ತಿದ್ದಾಗ ತೆಳ್ಳಾರು ಕಡೆಯಿಂದ ಕಾರ್ಕಳ ಕಡೆಗೆ ಚಾಲಕ ಅನಿರುದ್ದ್ ಪಂಡಿತ್ ಎಂಬವರು ತನ್ನ ಕಾರನ್ನು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಂದೀಪ್ ಶೆಣೈ ರಸ್ತೆಗೆ ಎಸೆಯಲ್ಪಟ್ಟು ಕೈಯ ಮೂಳೆ ಮುರಿತವಾಗಿದೆ. ಗಾಯಾಳನ್ನು ಕಾರ್ಕಳ ತೆಳ್ಳಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!