ಸಿಸಿ ಕ್ಯಾಮರಾದ ಡಿವಿಆರ್ ಹಾರ್ಡ್ ಡಿಸ್ಕನ್ನೇ ಹೊತ್ತೊಯ್ದ ಕಳ್ಳರು
ಕಾರ್ಕಳ : ಮುಂಡ್ಕೂರು ಉಪ ಅಂಚೆ ಕಚೇರಿಯ ಕಿಟಕಿ ಬಾಗಿಲು ಮುರಿದು ಕಳವಿಗೆ ಯತ್ನಿಸಿದ ಘಟನೆ ಆ. 23ರಂದು ಬೆಳಕಿಗೆ ಬಂದಿದೆ. ಉಪ ಅಂಚೆ ಕಚೇರಿಯ ಕಿಟಕಿಯ ಸರಳನ್ನು ಆಯುಧದಿಂದ ತುಂಡು ಮಾಡಿ ಒಳಪ್ರವೇಶಿಸಿ ಸುಮಾರು 4,500 ರೂ. ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಹಾಗೂ ಹಾರ್ಡ್ ಡಿಸ್ಕ್ ನ್ನು ಕಳ್ಳತನ ಮಾಡಿರುತ್ತಾರೆ. ಹಣದ ಡ್ರಾವರ್ ಸಹಿತ ಎಲ್ಲ ಕಡೆಯಲ್ಲಿ ಜಾಲಾಡಿದ ಕಳ್ಳರಿಗೆ ನಗದು ಸಿಕ್ಕಿಲ್ಲ.

ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.