Thursday, December 2, 2021
spot_img
HomeUncategorizedಜ್ಞಾನಸುಧಾ ಕಾಲೇಜಿನ ಸಾಮಾಜಿಕ ಕಾರ್ಯ ಶ್ಲಾಘನೀಯ - ಸದಾಶಿವ ಪ್ರಭು

ಜ್ಞಾನಸುಧಾ ಕಾಲೇಜಿನ ಸಾಮಾಜಿಕ ಕಾರ್ಯ ಶ್ಲಾಘನೀಯ – ಸದಾಶಿವ ಪ್ರಭು

ಕಾರ್ಕಳ : ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಗ್ರ ಅಭಿವೃದ್ದಿಯ ಕನಸು ಕಾಣಲು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಪೂರಕ ವಾತಾವರಣ ಕಲ್ಪಿಸುವುದು. ವಿದ್ಯಾರ್ಥಿಗಳಿಗೆ ಕೇವಲ ಶೈಕ್ಷಣಿಕ ಬೋಧನೆಯ ಮೂಲಕ ಅಂಕ ಗಳಿಕೆಗೆ ಸೀಮಿತಗೊಳಿಸದೇ, ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹರ್ಷದಾಯಕ ಎಂದು ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಅವರು ಆ. 21ರಂದು ಕಾರ್ಕಳ ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ, ಅಜೆಕಾರು ಪದ್ಮಗೋಪಾಲ್‍ ಎಜ್ಯುಕೇಶನ್‍ ಟ್ರಸ್ಟ್‌ ಸಂಸ್ಥಾಪಕ ಗೋಪ ಶೆಟ್ಟಿಯವರ ಜನ್ಮಶತಾಬ್ದಿ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ತವಿಲ್ಲದೇ ದೇಹವಿಲ್ಲ-ದೇಹವಿಲ್ಲದೇ ರಕ್ತವಿಲ್ಲ- ಡಾ. ರಾಮಚಂದ್ರ ಜೋಷಿ
ಜ್ಞಾನಸುಧಾ ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಂಸ್ಥಾಪಕರ ಜನ್ಮದಿನವನ್ನುಆಚರಿಸುತ್ತಿರುವುದು ಅಭಿನಂದನೀಯ. ರಕ್ತವೆಂಬುದು ದೇಹದ ಅವಿಭಾಜ್ಯ ಅಂಗ. ರಕ್ತವಿಲ್ಲದೆ ದೇಹವಿಲ್ಲ, ದೇಹವಿಲ್ಲದೆ ಜೀವವಿಲ್ಲ. ರಕ್ತದಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಜೀವಗಳನ್ನು ಉಳಿಸಲು ಸಾದ್ಯವಾಗಿದೆ ಎಂದು ಕಾರ್ಕಳ ರೆಡ್‌ ಕ್ರಾಸ್‌ ಘಟಕದ ಅಧ್ಯಕ್ಷ ಡಾ. ಕೆ. ರಾಮಚಂದ್ರ ಜೋಷಿ ಹೇಳಿದರು.

ಸಂಸ್ಥಾಪಕರ ಆಶಯ ಈಡೇರಿಕೆ
ಸಂಸ್ಥಾಪಕರು ಬಯಸಿದ ಸಮಾಜ ಸೇವೆ, ಶ್ರದ್ದೆ, ಪ್ರಾಮಾಣಿಕತೆ, ಕರ್ತವ್ಯ ಇದೆಲ್ಲವನ್ನುಅವರ ಮಗ ಡಾ. ಸುಧಾಕರ ಶೆಟ್ಟಿಯವರು ಈ ಸಂಸ್ಥೆಯ ಮೂಲಕ ಕಾರ್ಯರೂಪಗೊಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಸಿಸ್ಟರ್ ಕ್ರಿಸ್ಟೆಲ್ಲ ಹೇಳಿದರು.

ವಿದ್ಯಾರ್ಥಿ ವೇತನ
ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 600ಕ್ಕಿಂತ ಹೆಚ್ಚು ಅಂಕ ಗಳಿಸಿದ 17 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಕಾರ್ಕಳದ ಸಮಾಜ ಸೇವಕಿ ಆಯೇಷಾ ಅವರನ್ನು ಸನ್ಮಾನಿಸಲಾಯಿತು, ಕುಕ್ಕುಂದೂರು ಹಾಗೂ ಅಜೆಕಾರುಗ್ರಾಮ ಪಂಚಾಯತ್ ವ್ಯಾಪ್ತಿಯ 9 ದಿವ್ಯಾಂಗಿಗಳಿಗೆ ಗಾಲಿ ಕುರ್ಚಿಯನ್ನು ಹಸ್ತಾಂತರ. ಸಂಸ್ಥೆಯ ನಿವೃತ್ತ ಉದ್ಯೋಗಿಗಳಿಗೆ ಸನ್ಮಾನ, ದಿ.ಗೋಪ ಶೆಟ್ಟಿಯವರೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿದ್ದ 7 ಮಂದಿಯನ್ನು ಗೌರವಿಸಲಾಯಿತು.

110 ಯೂನಿಟ್‌ ರಕ್ತ ಸಂಗ್ರಹ
ಸಂಸ್ಥಾಪಕರ ಜನ್ಮ ಶತಾಬ್ದಿ ಕಾರ್ಯಕ್ರಮದಂಗವಾಗಿ ಉಡುಪಿ ಅಜ್ಜರಕಾಡು ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. 110 ಯುನಿಟ್‍ ರಕ್ತ ಸಂಗ್ರಹವಾಯಿತು.

ವೇದಿಕೆಯಲ್ಲಿ ಸುರತ್ಕಲ್‌ ಎನ್.ಐ.ಟಿ.ಕೆ.ಯ ಪ್ರೊ. ಎಸ್. ಎನ್‍. ಹೆಗ್ಡೆ, ಎ.ಪಿ.ಜಿ.ಇ.ಟಿ. ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಗೋಪ ಶೆಟ್ಟಿಯವರ ಹಿರಿಯ ಪುತ್ರ ಪ್ರಭಾಕರ್ ಶೆಟ್ಟಿ, ಟ್ರಸ್ಟಿಗಳಾದ ಕುರುಣಾಕರ್ ಶೆಟ್ಟಿ, ವಿದ್ಯಾವತಿ ಎಸ್. ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಉಭಯ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಪಿ.ಆರ್.ಒ, ಡೀನ್ಸ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಪ್ರಜ್ವಲ್‍ ಕುಲಾಲ್‍ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!