Tuesday, September 28, 2021
spot_img
Homeಸ್ಥಳೀಯ ಸುದ್ದಿನಿಟ್ಟೆ ಕಾಲೇಜಿನ ಪ್ರಾಧ್ಯಾಪಕಿ ಶಬರಿ ವಿ. ಶೆಟ್ಟಿಯವರಿಗೆ ಡಾಕ್ಟರೇಟ್‌ ಪದವಿ

ನಿಟ್ಟೆ ಕಾಲೇಜಿನ ಪ್ರಾಧ್ಯಾಪಕಿ ಶಬರಿ ವಿ. ಶೆಟ್ಟಿಯವರಿಗೆ ಡಾಕ್ಟರೇಟ್‌ ಪದವಿ

ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಬರಿ ವಿ. ಶೆಟ್ಟಿ ಅವರು ಮಂಡಿಸಿದ “ಅನಾಲಿಸಿಸ್ ಆಫ್ ಎಗ್ರಿಕಲ್ಚರಲ್ ಡಿಸೀಜ್ಡ್ ಡೇಟಾ ಯೂಸಿಂಗ್ ಮಷೀನ್ ಲರ್ನಿಂಗ್ ಟೆಕ್ನಿಕ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.‌ ತುಮಕೂರಿನ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಎಂ. ಸಿದ್ದಪ್ಪ ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಡಾ. ಸುರೇಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಶಬರಿ ವಿ. ಶೆಟ್ಟಿಯವರು ಪ್ರಬಂಧವನ್ನು ಮಂಡಿಸಿದ್ದರು.
ನಿವೃತ್ತ ಮುಖ್ಯಶಿಕ್ಷಕ ಜನ್ಮನೆ ಚಂದ್ರ ಶೆಟ್ಟಿ ಹಾಗೂ ಬಿಲ್ಲಾಡಿ ಮನೆ ಶಾಂತ ಸಿ. ಶೆಟ್ಟಿಯವರ ಪುತ್ರಿಯಾಗಿರುವ ಇವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೊಳಹಳ್ಳಿ ಡಾ. ವಿದ್ಯಾಸಾಗರ ಶೆಟ್ಟಿಯವರ ಪತ್ನಿ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!