Wednesday, January 26, 2022
spot_img
Homeಸ್ಥಳೀಯ ಸುದ್ದಿಕಾರ್ಕಳದಲ್ಲಿ ಶೌರ್ಯ ಸಿಂಪೋನಿ ರೆಕಾರ್ಡಿಂಗ್ ಸ್ಟುಡಿಯೋ ಶುಭಾರಂಭ

ಕಾರ್ಕಳದಲ್ಲಿ ಶೌರ್ಯ ಸಿಂಪೋನಿ ರೆಕಾರ್ಡಿಂಗ್ ಸ್ಟುಡಿಯೋ ಶುಭಾರಂಭ

ಕಾರ್ಕಳ : ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಶೌರ್ಯ ಸಿಂಪೋನಿ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಿರುವುದು ಉತ್ತಮ ವಿಚಾರ. ಬೆಳೆಯುತ್ತಿರುವ ಕಾರ್ಕಳಕ್ಕೆ ಇಂತಹ ಸ್ಟುಡಿಯೋವೊಂದರ ಅಗತ್ಯವೂ ಇತ್ತು ಎಂದು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಹಾಸ್‌ ಹೆಗ್ಡೆ ಹೇಳಿದರು.

ಅವರು ಆ. 20ರಂದು ಪುಲ್ಕೇರಿಯಲ್ಲಿ ಸುಧೀಂದ್ರ ಶಾಂತಿ ಮಾಲಕತ್ವದ ಶೌರ್ಯ ಸಿಂಪೋನಿ ರೆಕಾರ್ಡಿಂಗ್‌ ಸ್ಟುಡಿಯೋಗೆ ಚಾಲನೆ ನೀಡಿ ಮಾತನಾಡಿದರು.
ಮಾಲಕರ ಮಾತೃಶ್ರೀ ಪ್ರೇಮ ಜನಾರ್ದನ ಶಾಂತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸದಸ್ಯೆ ಶಾರದಾ ಮಣಿಶೇಖರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ, ವರ್ಧಮಾನ ಶಿಕ್ಷಣ ಸಂಸ್ಥೆ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ, ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಸುವರ್ಣ ಉಪಸ್ಥಿತರಿದ್ದರು. ರಮ್ಯಾ ಸುಧೀಂದ್ರ ಸ್ವಾಗತಿಸಿ, ಸುಬ್ರಹ್ಮಣ್ಯ ಕಾರ್ಕಳ ನಿರೂಪಿಸಿದರು. ಸುಧೀಂದ್ರ ಜನಾರ್ಧನ ಶಾಂತಿ ವಂದಿಸಿದರು.

ಆಡಿಯೋ, ಕರೊಕೆ ರೆಕಾರ್ಡಿಂಗ್‌, ಡಬ್ಬಿಂಗ್‌, ಶಾರ್ಟ್‌ ಮೂವಿ, ನಾಟಕ, ರೂಪಕ, ವಿಡಿಯೋ ಎಡಿಟಿಂಗ್‌ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9741968348 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!