Wednesday, January 26, 2022
spot_img
Homeಸ್ಥಳೀಯ ಸುದ್ದಿವಿಶ್ವಕರ್ಮ ಜನಾಂಗದ ಮೇಲೆ ಜಾತಿ ನಿಂದನೆ : ಯೋಗೀಶ್ ಆಚಾರ್ಯ ಇನ್ನಾ ಖಂಡನೆ

ವಿಶ್ವಕರ್ಮ ಜನಾಂಗದ ಮೇಲೆ ಜಾತಿ ನಿಂದನೆ : ಯೋಗೀಶ್ ಆಚಾರ್ಯ ಇನ್ನಾ ಖಂಡನೆ

ಕಾರ್ಕಳ : ಸುರತ್ಕಲ್‌ ನ ಕೃಷ್ಣಾಪುರ ಸುಷ್ಮಾ ಮಯ್ಯ ಎಂಬುವವರು ವಿಶ್ವಕರ್ಮ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ ಲೋಡ್ ಮಾಡಿರುವುದು ಖಂಡನೀಯವೆಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಯೋಗೀಶ್‌ ಇನ್ನಾ ಹೇಳಿದರು. ವಿಶ್ವಕರ್ಮರು ಶಾಂತಿಪ್ರಿಯರು ಹಾಗೆಂದು ಕೈಕಟ್ಟಿ ಕುಳಿತುಕೊಳ್ಳುವವರಲ್ಲ. ಇಂತಹ ಘಟನೆಗಳು ನಡೆದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿದೆ. ವಿಶ್ವಕರ್ಮ ಒಕ್ಕೂಟ ಹಾಗೂ ಸಮಾಜದ ವಿವಿಧ ಸಂಘಟನೆಗಳು ಈ ಕುರಿತು ದೂರು ದಾಖಲಿಸಿದ್ದು, ಕಾನೂನಿನ ಮುಖಾಂತರ ಹೋರಾಟ ನಡೆಸಲಾಗುವುದು. ಮಯ್ಯ ಅವರೊಬ್ಬರು ಯಕ್ಷಗಾನ ಕಲಾವಿದೆಯಾಗಿದ್ದು ಈ ರೀತಿ ಮಾಡಬಾರದಿತ್ತು. ಕಾಮಿಡಿ ವಿಡಿಯೋಗೋಸ್ಕರ ಇನ್ನೊಬ್ಬರ ಭಾವನೆಗೆ ಧಕ್ಕೆಯಾಗುವಂತೆ ಮಾಡುವುದು ಎಷ್ಟು ಸರಿ ? ಮಯ್ಯ ಅವರಿಗೆ ಪ್ರಬಲ ಸಮಾಜದವರ ಬಗ್ಗೆ ಈ ರೀತಿ ಹರಿಬಿಡಲು ಧೈರ್ಯವಿದೆಯೇ ? ಎಂದು ಯೋಗೀಶ್‌ ಪ್ರಶ್ನಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!