Sunday, September 26, 2021
spot_img
Homeದೇಶಆಫ್ಘನ್ ನಲ್ಲಿ ಪರಿಸ್ಥಿತಿ ಉದ್ವಿಗ್ನ: ಭಾರತೀಯ ರಾಯಭಾರಿ ಸೇರಿದಂತೆ 120 ಮಂದಿಯನ್ನು ಹೊತ್ತು ತರುತ್ತಿರುವ ವಿಮಾನ

ಆಫ್ಘನ್ ನಲ್ಲಿ ಪರಿಸ್ಥಿತಿ ಉದ್ವಿಗ್ನ: ಭಾರತೀಯ ರಾಯಭಾರಿ ಸೇರಿದಂತೆ 120 ಮಂದಿಯನ್ನು ಹೊತ್ತು ತರುತ್ತಿರುವ ವಿಮಾನ

ನವದೆಹಲಿ: ತಾಲಿಬಾನ್ ಉಗ್ರಗಾಮಿಗಳು ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ವಶಪಡಿಸಿಕೊಂಡ ನಂತರ ಅಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಮತ್ತು ಇತರ ಅಧಿಕಾರಿಗಳನ್ನು ಭಾರತೀಯ ವಾಯುಪಡೆಯ ವಿಮಾನದಲ್ಲಿ ತುರ್ತಾಗಿ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದನ್ ಬಗ್ಚಿ, ಕಾಬುಲ್ ನಲ್ಲಿರುವ ಭಾರತೀಯ ರಾಯಭಾರಿ ಮತ್ತು ಅವರ ಸಿಬ್ಬಂದಿಗಳನ್ನು ತಕ್ಷಣವೇ ಭಾರತಕ್ಕೆ ಕರೆತರಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಸದ್ಯ ಅಲ್ಲಿನ ಉದ್ವಿಗ್ನ ಕಠಿಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿ ಅವಲೋಕಿಸಿ ನಮ್ಮ ರಾಯಭಾರಿಯನ್ನು ವಾಪಸ್ ಭಾರತಕ್ಕೆ ಕರೆತರಲು ನಿರ್ಧರಿಸಲಾಗಿದೆ ಎಂದು ಬಗ್ಚಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಾಯುಪಡೆಯ ಅಧಿಕ ತೂಕದ ಸಾಗಣೆ ವಿಮಾನ ಸಿ-17 ಕಳೆದ ರಾತ್ರಿ ಕೆಲವು ಸಿಬ್ಬಂದಿಯನ್ನು ಕರೆತಂದಿದ್ದು, ಎರಡನೇ ವಿಮಾನ ಇಂದು ಹಲವರನ್ನು ಹೊತ್ತು ತರುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!