Sunday, October 2, 2022
spot_img
Homeಸ್ಥಳೀಯ ಸುದ್ದಿಕಾರ್ಕಳ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಧ್ವಜಾರೋಹಣ ಮಾಡದೇ ಅಗೌರವ

ಕಾರ್ಕಳ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಧ್ವಜಾರೋಹಣ ಮಾಡದೇ ಅಗೌರವ

ಕಾರ್ಕಳ : ಆಗಸ್ಟ್‌ 15ರ ಭಾನುವಾರ ದೇಶದ ಎಲ್ಲೆಡೆ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಎಲ್ಲ ಸರಕಾರಿ ಕಚೇರಿ ಮುಂದೆ ಧ್ವಜಾರೋಹಣ ಮಾಡಲಾಯಿತು. ಆದರೆ ಕಾರ್ಕಳ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮಾತ್ರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವಿರಲಿಲ್ಲ. ಧ್ವಜಾರೋಹಣ ಮಾಡದೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ್ ಹಾಗೂ ಅವರ ಕಚೇರಿ ಸಿಬ್ಬಂದಿ ರಜೆಯ ಮೂಡ್‍ನಲ್ಲಿದ್ದರು.

ಸರಕಾರದ ಸುತ್ತೋಲೆಯ ಪ್ರಕಾರ ಸ್ವಾತಂತ್ರ್ಯ ದಿನದಂದು ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣವನ್ನು ಮಾಡಬೇಕು. ಹೀಗಿದ್ದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರಕಾರದ ಸುತ್ತೋಲೆಯನ್ನು ಉಲ್ಲಂಘಿಸಿರುತ್ತಾರೆ.

ಧ್ವಜಸ್ತಂಭವಿಲ್ಲ
ಸಮಾಜ ಕಲ್ಯಾಣ ಇಲಾಖೆಯ ಹಾಲಿ ಕಟ್ಟಡದ ಸಮೀಪ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಾಮಗಾರಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಧ್ವಜಕಟ್ಟೆಯನ್ನು ಕಿತ್ತೆಸೆದಿದ್ದು ಇದಕ್ಕೆ ಬದಲಿ ಕಟ್ಟೆಯನ್ನು ನಿರ್ಮಿಸದೇ ಇರುವುದು ಅಧಿಕಾರಿಯ ಬೇಜವಾಬ್ದಾರಿಗೆ ಸಾಕ್ಷಿಯಂತಿದೆ.

ರಾಷ್ಟ್ರ ಧ್ವಜಾರೋಹಣ ಮಾಡದಿರುವುದು ದೇಶಕ್ಕೆ ಹಾಗೂ ಸಂವಿಧಾನಕ್ಕೆ ಮಾಡಿರುವ ಅಪಚಾರ: ಶ್ರೀನಿವಾಸ ಕಾರ್ಲ
ಪರಿಶಿಷ್ಠ ಸಮುದಾಯಗಳ ಕಲ್ಯಾಣಕ್ಕಾಗಿ ಇರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ ಧ್ವಜಾರೋಹಣ ಮಾಡದೇ ಅಧಿಕಾರಿಗಳು ಬೇಜವಾಬ್ದಾರಿ ತೋರಿರುವುದು ಖಂಡನೀಯ. ದೇಶವೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಿರುವಾಗ ಸರಕಾರಿ ಕಚೇರಿಯಲ್ಲಿ ದೇಶದ ಬಾವುಟ ಹಾರಿಸದಿರುವುದು ದೇಶಕ್ಕೆ ಹಾಗೂ ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದೆ.

ಶ್ರೀನಿವಾಸ್‌ ಕಾರ್ಲ

LEAVE A REPLY

Please enter your comment!
Please enter your name here

Most Popular

error: Content is protected !!