Saturday, October 16, 2021
spot_img
Homeಸ್ಥಳೀಯ ಸುದ್ದಿನಿಟ್ಟೆ : ಅಖಂಡ ಭಾರತ ಸಂಕಲ್ಪ ದಿನ

ನಿಟ್ಟೆ : ಅಖಂಡ ಭಾರತ ಸಂಕಲ್ಪ ದಿನ

ಅಖಂಡ ಭಾರತ ತ್ರಿಖಂಡವಾದ ಕರಾಳ ಇತಿಹಾಸ ಮರೆಯಬಾರದು- ಮುರಳಿಕೃಷ್ಣ ಹಸಂತಡ್ಕ

ಕಾರ್ಕಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ ನಿಟ್ಟೆ ವಲಯ ವತಿಯಿಂದ ನೆಲ್ಲಿನಿಟ್ಟೆಯಲ್ಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ನಡೆಯಿತು. ಕರ್ನಾಟಕ ರಾಜ್ಯ ಬಜರಂಗದಳ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಆಗಸ್ಟ್ 15 ರಂದು ಸಿಹಿ ಹಂಚಿ ಸಂಭ್ರಮಿಸುವ ನಾವು 14 ರ ಮಧ್ಯರಾತ್ರಿಯಲ್ಲಿ ನಡೆದ ಹಿಂದೂಗಳ ನರಮೇಧ ಮತ್ತು ನಮ್ಮ ಸಹೋದರಿಯರ ಮೇಲೆ ನಡೆದ ದೌರ್ಜನ್ಯವನ್ನು ಮರೆತಿದ್ದೇವೆ. ಅಖಂಡವಾಗಿದ್ದ ಭಾರತವನ್ನು ತ್ರಿಖಂಡವಾಗಿ ಹಂಚಿದ ಕರಾಳ ಇತಿಹಾಸ ಇವತ್ತಿನ ಯಾವ ಪಠ್ಯ ಪುಸ್ತಕವೂ ತಿಳಿಸಿಕೊಡುವುದಿಲ್ಲ. ನಮ್ಮ ಮುಂದಿನ ಪೀಳಿಗೆಗೆ ನಾವೇ ನಮ್ಮ ದೇಶದ ಇತಿಹಾಸ ತಿಳಿಸುವ ಮೂಲಕ ಜಾಗೃತಗೊಳಿಸಬೇಕಾಗಿದೆ ಎಂದರು.

ಉದ್ಯಮಿ ವಿಜಯ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಸಹ ಕಾರ್ಯದರ್ಶಿ ಸುಧಿರ್ ನಿಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಕ್ಷೇತ್ರ ನೆಲ್ಲಿ ಇಲ್ಲಿನ ಅನುವಂಶೀಯ ಮೋಕ್ತೇಸರ ಜಗನ್ನಾಥ ಪೂಜಾರಿ, ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಉಪಾಧ್ಯಕ್ಷ ಅಶೋಕ್ ಕುಮಾರ್ ಜೈನ್, ಬಜರಂಗದಳ ಕಾರ್ಕಳ ಪ್ರಖಂಡ ಗೋ ರಕ್ಷಾ ಪ್ರಮುಖ್ ಪ್ರಸಾದ್ ನಿಟ್ಟೆ, ವಿಶ್ವ ಹಿಂದೂ ಪರಿಷದ್ ನಿಟ್ಟೆ ವಲಯ ಉಪಾಧ್ಯಕ್ಷ ಜಯರಾಮ್ ಶೆಟ್ಟಿ ಬೋಳ, ಕಾರ್ಯದರ್ಶಿ ಸುಶಾಂತ್ ಕೆಮ್ಮಣ್ಣು, ಸಂಚಾಲಕ್ ಪ್ರಣಯ್ ನಿಟ್ಟೆ ಉಪಸ್ಥಿತರಿದ್ದರು. ಸನತ್ ಬಾರಾಡಿ ಸ್ವಾಗತಿಸಿ, ಮನೀಷ್ ನಿಟ್ಟೆ ವಂದಿಸಿದರು, ಶೈಲೇಶ್ ಸಾಣೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!