Sunday, September 26, 2021
spot_img
Homeಸ್ಥಳೀಯ ಸುದ್ದಿತಾಲೂಕಿನ ವಿವಿಧೆಡೆ ಸ್ವಾತಂತ್ರೋತ್ಸವ ಆಚರಣೆ

ತಾಲೂಕಿನ ವಿವಿಧೆಡೆ ಸ್ವಾತಂತ್ರೋತ್ಸವ ಆಚರಣೆ

ನಲ್ಲೂರು ಶಾಲಾ ಪೋಷಕರ ಪ್ರತಿ ಮನೆಯಲ್ಲಿ ಧ್ವಜಾರೋಹಣ

ಕಾರ್ಕಳ : ಕಾರ್ಕಳ-ಹೆಬ್ರಿ ಉಭಯ ತಾಲೂಕಿನೆಲ್ಲೆಡೆ ಆ. 15ರಂದು ಸಂಭ್ರಮದಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿ ಮಕ್ಕಳು ಪೋಷಕರೊಂದಿಗೆ ತಮ್ಮ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಅರಳಿಸುವ ಮೂಲಕ ಅಮೃತಮಹೋತ್ಸವಕ್ಕೆ ಹೊಸ ಮೆರುಗು ತಂದರು. ಶಾಲೆಯ 121 ಮಕ್ಕಳು ತಮ್ಮ ಮನೆಯಂಗಳದಲ್ಲಿ ಪೋಷಕರೊಂದಿಗೆ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಶಾಲೆಯಲ್ಲಿ ಪಂಚಾಯತ್‌ ಅಧ್ಯಕ್ಷೆ ಕವಿತಾ ಧ್ವಜಾರೋಹಣ ನೆರವೇರಿಸಿದರು.

ನಲ್ಲೂರು

ವಿಜೇತ ವಿಶೇಷ ಶಾಲೆಯಲ್ಲಿ ರಶ್ಮಿ ಚಾರಿಟೇಬಲ್ ಟ್ರಸ್ಟ್ ರಿ. ಹಾಗೂ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್. ರಾಜು ಧ್ವಜಾರೋಹಣಗೈದರು. ಬಿ.ಸಿ.ರೋಡ್‌ ಉದ್ಯಮಿ ವಿಜಯ್ ಅಯ್ಯಂಗಾರ್ ಶಾಲೆಗೆ ಅವಶ್ಯಕವಿರುವ 20 ಸಾವಿರ ಮೌಲ್ಯದ ಅಡುಗೆ ಪಾತ್ರೆ ನೀಡಿದರು.
ಕುಂದಾಪುರದ ರಕ್ಷಿತ್ ಶೆಟ್ಟಿ ಅವರು ಶಾಲೆಯ 80 ವಿದ್ಯಾರ್ಥಿಗಳಿಗೆ ಉಚಿತವಾಗಿ ಮಣಿಪಾಲ್ ಆರೋಗ್ಯ ಕಾರ್ಡ ಹಸ್ತಾಂತರಿಸಿದರು.

1 ಲಕ್ಷ ರೂ. ದೇಣಿಗೆ
ಸಂದೀಪ್ ದೇವಾಡಿಗ ಮತ್ತು ರಂಜಿತಾ ಸಂದೀಪ್ ದಂಪತಿಗಳ ಮಗ ಮಾ. ಮಿಥಾಂಶ್‌ ಸ್ಮರಣಾರ್ಥ ವಿಜೇತ ವಿಶೇಷ ಶಾಲೆಗೆ 1 ಲಕ್ಷ ರೂ. ದೇಣಿಗೆ ಹಸ್ತಾಂತರಿಸಿದರು.

ಸ್ವಾತಂತ್ರೋತ್ಸವ ಹಾಗೂ ಸಚಿವ ಸುನಿಲ್‌ ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ 57 ಮಂದಿಗೆ ಹಣ್ಣು ಹಂಪಲು ನೀಡಲಾಯಿತು.

ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೇಸಿಐ 15 ರ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಧ್ವಜಾರೋಹಣಗೈದು ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು
ಸಾಣೂರು ಯುವಕ ಮಂಡಲ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಕಳ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!