Thursday, December 2, 2021
spot_img
Homeಸ್ಥಳೀಯ ಸುದ್ದಿಕಲಾನಿಧಿ ಸೂಪರ್‌ ಸಿಂಗರ್‌ ಸ್ಪರ್ಧೆ

ಕಲಾನಿಧಿ ಸೂಪರ್‌ ಸಿಂಗರ್‌ ಸ್ಪರ್ಧೆ

ಸಹನಾ ಭಟ್‌ ಕುಳಾಯಿ ಪ್ರಥಮ-ಶರಣ್ಯ ಕಾರ್ಕಳ ದ್ವಿತೀಯ

ಕಲಾಸ್ಫೂರ್ತಿಯಿಂದ ಭಾಗವಹಿಸುವುದೇ ಮುಖ್ಯ- ಕಲಾವತಿ ದಯಾನಂದ್‌

ಕಾರ್ಕಳ : ಕಲಾನಿಧಿ ಕಾರ್ಕಳ ವತಿಯಿಂದ ನ್ಯೂಸ್ ಕಾರ್ಕಳ ಸಹಯೋಗದೊಂದಿಗೆ ಆ. 15ರಂದು ಕಾರ್ಕಳ ನಾರಾಯಣ ಗುರು ಸಭಾಭವನದಲ್ಲಿ ಸೂಪರ್‌ ಸಿಂಗರ್‌ (ಕರೋಕೆ ಗಾಯನ) ಸ್ಪರ್ಧೆಯಲ್ಲಿ ಸಹನಾ ಭಟ್‌ ಕುಳಾಯಿ ಪ್ರಥಮ, ಶರಣ್ಯ ಕಾರ್ಕಳ ದ್ವಿತೀಯ, ಶ್ರೀಹರಿ ಹೊಳ್ಳ ಹಾಗೂ ದಿನೇಶ್‌ ತೃತೀಯ ಸ್ಥಾನ ಪಡೆದಿರುತ್ತಾರೆ.

47 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು ಕೊನೆಯ ಹಂತಕ್ಕೆ 6 ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದರು. ಹಿರಿಯ ಸಂಗೀತ ನಿರ್ದೇಶಕರಾದ ಸತೀಶ್‌ ಸುರತ್ಕಲ್‌, ವಿದ್ವಾನ್‌ ಯಶ್ವಂತ್‌ ಎಂ.ಜಿ., ವೈಷ್ಣವಿ ಮಣಿಪಾಲ್‌ ತೀರ್ಪುಗಾರರಾಗಿದ್ದರು.

ಉದ್ಘಾಟನಾ ಸಮಾರಂಭ
ಬಿಲ್ಲವ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಆರ್.‌ ರಾಜು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್‌ ರಾವ್‌, ಪ್ರಿಯದರ್ಶಿನಿ ಗ್ಯಾಸ್‌ ಏಜೆನ್ಸಿ ಹಾಗೂ ಕಲಾನಿಧಿ ಗೌರವಾಧ್ಯಕ್ಷ ಕೃಷ್ಣ ಮೂರ್ತಿ, ಕಲಾನಿಧಿ ಅಧ್ಯಕ್ಷರಾದ ರಾಜೇಂದ್ರ, ಪದಾಧಿಕಾರಿಗಳಾದ ರಾಜೇಶ್‌, ಮಜಾ ಟಾಕೀಸ್‌ ಖ್ಯಾತಿಯ ಮೋಹನ್‌ ಕಾರ್ಕಳ, ಕಲಾರಂಗ ಕಾರ್ಕಳದ ಪ್ರಭಾಕರ್‌ ಬಂಗೇರಾ, ಇಗ್ನೇಶಿಯಸ್‌ ಪೌಲ್‌, ಪ್ರಕಾಶ್‌ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭ

ಕಲಾಸ್ಫೂರ್ತಿಯಿಂದ ಭಾಗವಹಿಸುವುದೇ ಮುಖ್ಯ
ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕಲಾವತಿ ದಯಾನಂದ್‌ ಬಹುಮಾನ ವಿತರಿಸಿ, ಮಾತನಾಡಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾನಿಧಿ ಕಾರ್ಕಳ ಅದ್ಭುತ ಕಾರ್ಯ ಮಾಡುತ್ತಿದೆ. ಮೋಹನ್‌ ಕಾರ್ಕಳ, ರಾಜೇಂದ್ರ, ರಾಜೇಶ್‌ ಅವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಅವರ ಸ್ನೇಹ, ಅವರು ಕಲೆಯನ್ನು ಆರಾಧಿಸುವ ಬಗೆ ಶ್ಲಾಘನೀಯ. ಅವಕಾಶ ಸಿಕ್ಕಾಗ ಪ್ರತಿಭೆಯನ್ನು ವ್ಯಕ್ತಪಡಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯವೆಂದರು.

ಕಲಾವತಿ ದಯಾನಂದ್‌ ಅವರಿಗೆ ಸನ್ಮಾನ

ನೇರ ಪ್ರಸಾರ
ಇಡೀ ಸ್ಪರ್ಧೆಯನ್ನು ನ್ಯೂಸ್‌ ಕಾರ್ಕಳ ಯೂಟ್ಯಬ್‌ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು. ಸಾವಿರಾರು ಮಂದಿ ಈ ಮೂಲಕ ಕಾರ್ಯಕ್ರಮ ವೀಕ್ಷಿಸಿದರು. ಸ್ಪರ್ಧೆಯ ಅಂತಿಮ ಹಂತದಲ್ಲಿ ಆಯ್ಕೆಯಾದ 6 ಮಂದಿ ನ್ಯೂಸ್‌ ಕಾರ್ಕಳದ ನನ್ನ ಹಾಡು ನನ್ನದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹಿರಿಯ ನ್ಯಾಯವಾದಿ ಕೆ. ವಿಜೇಂದ್ರ ಕುಮಾರ್‌, ಸುಶಾಂತ್‌ ಸುಧಾಕರ್‌, ನಾರಾಯಣ ಕೆ., ರತ್ನಾಕರ್‌ ಮರಾಠೆ, ವೃಷಭರಾಜ್‌ ಕಡಂಬ, ದೇವಾಡಿಗ ಸಂಘದ ಅಧ್ಯಕ್ಷ ಹರೀಶ್‌ ಕುಮಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುನಿತಾ ಬಂಗೇರಾ ಪ್ರಾರ್ಥಿಸಿ, ಸುಬ್ರಹ್ಮಣ್ಯ ಹಾಗೂ ಜ್ಯೋತಿ ರಮೇಶ್‌ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್‌ ದೇವಾಡಿಗ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!