Tuesday, December 7, 2021
spot_img
HomeUncategorizedಭೇದಭಾವ ಮರೆತು ಭಾವೈಕ್ಯತೆ ಮೆರೆಯಬೇಕು : ತಹಶೀಲ್ದಾರ್‌ ಪ್ರಕಾಶ್‌ ಮರಬಳ್ಳಿ

ಭೇದಭಾವ ಮರೆತು ಭಾವೈಕ್ಯತೆ ಮೆರೆಯಬೇಕು : ತಹಶೀಲ್ದಾರ್‌ ಪ್ರಕಾಶ್‌ ಮರಬಳ್ಳಿ

ರಾಷ್ಟ್ರೀಯ ಉತ್ಸವಗಳು ರಜೆ ಕಳೆಯುವ ಉತ್ಸವವಾಗದಿರಲಿ

ಕಾರ್ಕಳ : ಭಾರತ ಜಾಗತಿಕ ಸ್ಪರ್ಧೆಯನ್ನು‌ ಮೆಟ್ಟಿ‌ನಿಂತು ಮುಂಚೂಣಿಯತ್ತ ಸಾಗುತ್ತಿದೆ. ಇಂತಹ ಸಂದರ್ಭ ನಮ್ಮೊಳಗಿನ ಭೇದಭಾವ ಮರೆತು ನಾವೆಲ್ಲರೂ ಭಾವೈಕ್ಯತೆ ಮೆರೆಯಬೇಕಾಗಿದೆ. ಗಾಂಧಿಯವರ ಅಹಿಂಸಾ ಧರ್ಮದ ಕನಸು ಸಾಕಾರವಾಗಬೇಕಾದರೆ ಸಾಮರಸ್ಯ, ಸಹಬಾಳ್ವೆಯ ಜೀವನ ನಡೆಸಬೇಕಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ‌ ಅಭಿಪ್ರಾಯಪಟ್ಟರು.

ಅವರು ಆ. 15ರಂದು ಕಾರ್ಕಳ ಗಾಂಧಿ ಮೈದಾನದಲ್ಲಿ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಸಿ ಬಳಿಕ ಮಾತನಾಡಿದರು. ರಾಷ್ಟ್ರೀಯ ಉತ್ಸವಗಳು ರಜೆ ಕಳೆಯುವ ಉತ್ಸವಗಳಾಗದೇ ದೇಶದ ಕುರಿತು ಚಿಂತನೆ ನಡೆಸುವ ಕ್ರಿಯಾಶೀಲತೆಯ ಉತ್ಸವಗಳಾಗಬೇಕು. ಇತರರ ಹಕ್ಕಿಗೆ ಧಕ್ಕೆಯಾಗದಂತೆ ನಮ್ಮ ಹಕ್ಕುಗಳನ್ನು ನಾವು ಚಲಾಯಿಸಬೇಕೆಂದು ಅವರು ಸ್ವಾತಂತ್ರೋತ್ಸವ ಸಂದೇಶದಲ್ಲಿ ಹೇಳಿದರು.

ಕೊರೊನಾ ವಾರಿಯರ್ಸ್ ಯೋಧರಾದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯಶೋಧರ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ, ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀನಿವಾಸ ಪೈ, ನೋಡಲ್ ಅಧಿಕಾರಿ ಭಾಸ್ಕರ್, ಅಜೆಕಾರಿನ ಶುಶ್ರೂಷಕಿ ಸೌಮ್ಯಾಶ್ರೀ, ನಿಟ್ಟೆಯ ಸುದರ್ಶನ, ಇರ್ವತ್ತೂರಿನ ನರಸಿಂಹ ಕಿಣಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ. ವಿ. ಶಿವರಾಮ ರಾವ್, ಅನ್ನುಕುಟ್ಟಿ, ಪುಷ್ಪಲತಾ, ಅರುಣ ಕುಮಾರ್ ಜೈನ್, ಬೈಲೂರಿನ ಸಂದೀಪ ಪೂಜಾರಿ, ಮಾಳದ ಪದ್ಮಲತಾ ದೇವಾಡಿಗ, ಮಿಯಾರಿನ ಆಶಾ ಕಾರ್ಯಕರ್ತೆ
ಜಯಶ್ರೀ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಪುರಸಭೆಯ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಾಹಣಾಧಿಕಾರಿ ಗುರುದತ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ಡಿವೈಎಸ್ಪಿ ವಿಜಯ ಪ್ರಸಾದ್, ಸಿಪಿಐ ಸಂಪತ್ ಕುಮಾರ್, ನಗರ ಠಾಣೆಯ ಎಸ್‌ಐ ಮಧು ಬಿ.ಇ, ಗ್ರಾಮಾಂತರ ಠಾಣೆಯ ಎಸ್‌ಐ ತೇಜಸ್ವಿ ಮೊದಲಾದವರು ಉಪಸ್ಥಿತರಿದ್ದರು.
ಸಂಜಯ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!