Wednesday, January 19, 2022
spot_img
HomeUncategorizedಕುಂಟಲ್ಪಾಡಿ : ಅಖಂಡ ಭಾರತ ಸಂಕಲ್ಪ ದಿನ

ಕುಂಟಲ್ಪಾಡಿ : ಅಖಂಡ ಭಾರತ ಸಂಕಲ್ಪ ದಿನ

ಸರ್ವರನ್ನೂ ಸಹೋದರತೆಯಿಂದ ಕಾಣಬೇಕಿದೆ- ಕೃಷ್ಣ ಉಪಾಧ್ಯಾಯ

ಭಾರತ ಕಳೆದುಕೊಂಡಿರುವ ಭೂ ಭಾಗವನ್ನು ಮತ್ತೆ ಪಡೆದುಕೊಳ್ಳುವುದು ಮಾತ್ರವಲ್ಲ ಭಾರತದೊಳಗಿರುವ ರಾಜ್ಯಗಳು ಪರಸ್ಪರ ಸಹೋದರತೆ, ಪ್ರೀತಿ, ವಿಶ್ವಾಸಗಳಿಂದ ಒಗ್ಗಟ್ಟಾಗಿ ಇರಬೇಕಾಗಿದೆ ಎಂದು ಶ್ರೀ ಕೃಷ್ಣ ಉಪಾಧ್ಯಾಯ ಹೇಳಿದರು.

ಅವರು ಆ. 12ರಂದು ಹಿಂದೂ ಜಾಗರಣ ವೇದಿಕೆ ಕಾರ್ಕಳ ತಾಲೂಕು ಘಟಕದ ವತಿಯಿಂದ ಕುಂಟಲ್ಪಾಡಿ ಅಂಬಾ ಭವಾನಿ ಗಾಲಿಮಾರಿ ದೇವಸ್ಥಾನದ ಸಭಾಂಗಣದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದೊಳಗಿರುವ ಎಲ್ಲ ಭಾರತೀಯರು ದೇಶದ ಜಲ, ನೆಲ, ಸೇನೆ, ಸರಕಾರ, ಕಾನೂನನ್ನು ಗೌರವಿಸುವುದೇ ಅಖಂಡ ಭಾರತ ಸಂಕಲ್ಪ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ದಿನವನ್ನು ಸಂಭ್ರಮದ ದಿನ ಎಂಬಂತೆ ಆಚರಿಸುತ್ತೇವೆ. ಹಿರಿಯ ಲೇಖಕ ಹೋ.ವೇ ಶೇಷಾದ್ರಿ ಆಗಸ್ಟ್ 15 , 1947 ಅಂದರೆ ಮನುಕುಲವು ಎಂದೂ ಕಂಡರಿಯದ ದುರಂತಕ್ಕೆ ಜನ್ಮವಿತ್ತ ವಿಷ ಘಳಿಗೆಯಾಗಿತ್ತು ಎಂದು ಬರೆದಿರುತ್ತಾರೆ. ಈ ಮಾತಿನ ತಾತ್ಪರ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದವರು ಹೇಳಿದರು.

ಉದ್ಯಮಿ ನಿತ್ಯಾನಂದ ಪೈ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ, ಹಿಂಜಾವೇ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಹಿಂಜಾವೇ ಕಾರ್ಕಳ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಯಮಿ ಶ್ರೀ ಕೆದಿಂಜೆ ಸುಬ್ಬಣ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಕಾರ್ಕಳ ನಗರ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಹಿಂಜಾವೇ ಕಾರ್ಕಳ ನಗರ ಪ್ರಧಾನ ಕಾರ್ಯದರ್ಶಿ ಸುಜಿತ್ ಸಫಲಿಗ ಉಪಸ್ಥಿತರಿದ್ದರು.
ಜ್ಯೋತಿ ರಮೇಶ್‌ ವಂದೆಮಾತರಂ ಹಾಡಿದರು. ರಮೇಶ್‌ ಕಲ್ಲೊಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!